ಸ್ಟೇಟಸ್ ಕತೆಗಳು (ಭಾಗ ೪೫೧) - ಆಗುವುದೆಲ್ಲಾ...

ಸ್ಟೇಟಸ್ ಕತೆಗಳು (ಭಾಗ ೪೫೧) - ಆಗುವುದೆಲ್ಲಾ...

ಅವತ್ತು ನಮ್ಮೂರನ್ನು ಬಿಟ್ಟು ಇನ್ನೊಂದೂರಿಗೆ ಪಯಣ ಹೊರಟಿದ್ದೆ. ಅವರು ಹೇಳಿದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ರಸ್ತೆ ಬದಿ ನನ್ನ ಬಿಟ್ಟು ಮುಂದುವರೆದರು. ಗೆಳೆಯನಿಗೆ ಕರೆ ಮಾಡಿದರೂ ಆತ ಅಲ್ಲಿಗೆ ಬರುವ ಸ್ಥಿತಿಯಲ್ಲಿರಲಿಲ್ಲ. ಇನ್ನೂ ಒಂದುಗಂಟೆ ಸಮಯವಿತ್ತು. ಏನು ಮಾಡುವುದು ಗೊತ್ತಾಗಲಿಲ್ಲ ರಸ್ತೆ ಬದಿ ಕುಳಿತು ಪರೀಕ್ಷೆಗೆ ಓದುವ ಕಾರ್ಯಾರಂಭ ಮಾಡಿದೆ. ಮುಂದೊಂದು ದಿನ ನಾನು ಕೂಡ ಎಲ್ಲಾದರೂ ರಸ್ತೆ ಬದಿ ಓದಿ ಒಳ್ಳೆ ಅಂಕ ಪಡೆದ ಅಂತ ಭಾಷಣ ಮಾಡೋದಕ್ಕೆ ಒಳ್ಳೆ ಕಂಟೆಂಟ್ ಅಂತ ಯೋಚನೆ ಮಾಡಿದೆ. ಅಲ್ಲಿಗೆ ಒಬ್ಬರು ಅಜ್ಜಿ ಬಂದು ಮಗ ಈ ನಂಬರಿಗೆ ಒಂದು ಕರೆ ಮಾಡು ನನ್ನ ನನ್ನ ಮಗ ಬಂದು ಕರೆದುಕೊಂಡು ಹೋಗಬೇಕು ಅವನಿನ್ನೂ ಬಂದೇ ಇಲ್ಲ ಅಂತ ಹೇಳಿ ನಂಬರ್ ಕೊಟ್ಟರು. ನಾನು ಕರೆ ಮಾಡಿದ ತಕ್ಷಣ ಆ ವ್ಯಕ್ತಿ ಆ ಜಾಗದ ಅಡ್ರೆಸ್ ಕೇಳಿ ನಾನು ಈಗ ಬರುತ್ತೇನೆ ಅಂತ ಅಂದು15 ನಿಮಿಷದಲ್ಲಿ ಬಂದು ಅಜ್ಜಿನ ಕರೆದುಕೊಂಡು ಹೋದರು. ಇನ್ನೊಬ್ರು ಅಜ್ಜ ಬಂದು "ಒಂದು ಕರೆ ಮಾಡು, ನಾನು ಇವತ್ತು ಕ್ಲೀನ್ ಮಾಡೋದಕ್ಕೆ ಬಂದಿರುವುದು ಪ್ರತಿದಿನ ಬರೋರಿಗೆ ಇವತ್ತು ಮೈ ಹುಷಾರಿಲ್ಲ ಇವರಿಗೆ ಕಾಲ್ ಮಾಡಿದರೆ ಮಾತ್ರ ಗೇಟಿನ ಬೀಗ ತೆಗಿತಾರೆ. ನನ್ನ ಮೊಬೈಲ್ನಲ್ಲಿ ಕರೆನ್ಸಿ ಇಲ್ಲ." ಆ ಕೆಲಸವನ್ನು ಮಾಡಿ ಬಿಟ್ಟೆ. ಸ್ವಲ್ಪ ಹೊತ್ತು ಆದ ಮೇಲೆ ಒಂದು ಆಟೋ ಬಂದು ನನ್ನ ಗೆಳೆಯರ ಬಳಗಕ್ಕೆ ತಲುಪಿದೆ .ನಾನೆಲ್ಲಾದರೂ ಅಷ್ಟುಬೇಗ ಅಲ್ಲಿಗೆ ಬರದೇ ಇರುತ್ತಿದ್ದರೆ ಅವರಿಗೆ ಸಹಾಯವನ್ನು ನನ್ನ ಕೈಯಿಂದ ಆಗ್ತಾ ಇರ್ಲಿಲ್ಲ. ಹಾಗಾಗಿ ನಮ್ಮ ಜೀವನದಲ್ಲಿ ಆಗುವುದೆಲ್ಲಾ ಒಳ್ಳೆಯದಕ್ಕೆ. ಯಾವುದೇ ಕ್ಷಣದಲ್ಲಿ  ಏನೋ ಕೆಲಸ ಆಗಬೇಕಾಗಿದೆ ಅದಕ್ಕಾಗಿ ನಮ್ಮ ಜೀವನದಲ್ಲಿ ಬೇರೆ ಬೇರೆ ಘಟನೆಗಳು ಘಟಿಸುತ್ತವೆ. ಎಲ್ಲವನ್ನು ಒಳ್ಳೆಯದಕ್ಕೆ ಅಂದುಕೊಂಡು ಮುಂದುವರಿಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ