ಸ್ಟೇಟಸ್ ಕತೆಗಳು (ಭಾಗ ೪೫೩) - ಮಾತುಕತೆ

ಸ್ಟೇಟಸ್ ಕತೆಗಳು (ಭಾಗ ೪೫೩) - ಮಾತುಕತೆ

ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ ಕೆಲಸ ಮಾಡುತ್ತಾ ಇರುತ್ತಾರೆ. ಆದರೆ ಕೆಲಸ ಮಾಡೋರು ಎಲ್ಲಾ ಕಡೆಯೂ ಸಿಕ್ತಾರೆ. ಮಾಡುತ್ತಿರುವ ಕೆಲಸವನ್ನು ಪ್ರೀತಿಸುವವರು ಸಿಕ್ಕಿದಾಗ ಆ ಕೆಲಸದ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಬೇಕಾಗಿಲ್ಲ. ಯಾಕೆಂದರೆ ಯಾರು ಆ ಕೆಲಸವನ್ನು ಪ್ರೀತಿಸುತ್ತಿರುತ್ತಾನೆ. ಆ ಕೆಲಸದಲ್ಲಿ ಯಾವುದೇ ಸಣ್ಣ ಪುಟ್ಟ ತಪ್ಪುಗಳನ್ನೂ ಮಾಡುವುದಿಲ್ಲ. ಜೊತೆಗೆ ಮಾಡುತ್ತಿರುವ ಕೆಲಸವನ್ನು ಮುತುವರ್ಜಿಯಿಂದ ಅದರ ಪರಿಣಾಮ ಪೂರ್ಣವಾಗಿ ತಲುಪುವ ಹಾಗೆ ಮಾಡ್ತಾನೆ. ಬರಿಯ ಸಹದ್ಯೋಗಿಗಳು ಬೇಡ .ಮಾಡುತ್ತಿರುವ ಉದ್ಯೋಗವನ್ನು ತುಂಬ ಪ್ರೀತಿಯಿಂದ ನಿರ್ವಹಿಸುವವರು ಇದ್ದಾಗ ನನಗೂ ನನ್ನ ಕೆಲಸವನ್ನು ಇನ್ನಷ್ಟು ಪ್ರೀತಿಯಿಂದ ಮಾಡುವುದಕ್ಕೆ ಸಾಧ್ಯವಾಗುತ್ತದೆ." ಇದು ದೊಡ್ಡವರು ಒಬ್ಬರ ಜೊತೆ ನಡೆದ ಮಾತುಕತೆ” .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ