ಸ್ಟೇಟಸ್ ಕತೆಗಳು (ಭಾಗ ೪೬೬) - ಕಾಣೆಯಾದವರು

ಸ್ಟೇಟಸ್ ಕತೆಗಳು (ಭಾಗ ೪೬೬) - ಕಾಣೆಯಾದವರು

ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ ತೆರಳಿ ಯಾರನ್ನು ಹುಡುಕುತ್ತಿದ್ದೀರಾ ? ಅನ್ನೋದನ್ನ ಕೇಳಿದ್ದಕ್ಕೆ, ಅವನು ಹೇಳಿದ್ದ, "ನನ್ನ ಜೊತೆ ತುಂಬಾ ಸಮಯದವರೆಗೆ ನಡೆದು ಬರುತ್ತಿದ್ದವರು, ತುಂಬಾ ಕಾಳಜಿ ತೋರಿಸೋರು, ಮುದ್ದು ಮಾಡೋರು, ಪ್ರೀತಿಯಿಂದ ಮಾತಾಡೋರು, ತಪ್ಪನ್ನು ತಿದ್ದಿ ಹೇಳೋರು, ಅನಗತ್ಯವಾಗಿ  ಗದರಿಸಿದೆ ಸರಿದಾರಿಯಲ್ಲಿ ಹೋಗಬೇಕು ಅನ್ನೋದನ್ನ ತಿಳಿಸುವವರು, ಹೊಸ ಅವಕಾಶಗಳನ್ನು ಕೊಡೋರು, ನನ್ನೊಳಗಿನ ಚೈತನ್ಯಕ್ಕೆ ಮತ್ತೆ ಮತ್ತೆ ನೀರೆರದು ಪೋಷಿಸುವವರು, ನನ್ನನ್ನು ನಾನಾಗಿ ರೂಪಿಸುವುದಕ್ಕೆ ಬೆನ್ನೆಲುಬಾಗಿ ನಿಂತವರು, ಹೀಗೆ ಸದಾ ನನ್ನವರಾಗಿ ನನ್ನ ಜೊತೆಗೆ ನಿಂತವರು ಇದ್ದರು. ಆದರೆ ಕೆಲವು ಸಮಯಗಳಿಂದ ಅವರು ಕಾಣಿಸ್ತಾ ಇಲ್ಲ. ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ಯಾವ ಕಾರಣಕ್ಕೆ ನನ್ನ ತೊರೆದಿದ್ದಾರೆ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ನನ್ನ ಜೊತೆಗಿರಬೇಕು. ನಿಮಗೆಲ್ಲಾದರೂ ಅವರು ಸಿಕ್ಕರೆ ದಯವಿಟ್ಟು ತಿಳಿಸಿ. ಸದ್ಯಕ್ಕೆ ನನಗೆ ಅವರ ಅವಶ್ಯಕತೆ ಇದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ