ಸ್ಟೇಟಸ್ ಕತೆಗಳು (ಭಾಗ ೪೭೮) - ಬರಿಯ ಗೋಡೆಗಳು
ಬರಿಯ ಗೋಡೆಗಳನ್ನು ಕಟ್ಟಿ ಮಾಡುವುದೇನೋ ಮಾರಾಯ? ಗೋಡೆಗಳೊಳಗೆ ಬಂದಿಯಾಗಿ ಉಸಿರುಗಟ್ಟಿ ಸಾಯುತ್ತೀಯಾ? ಒಂದು ಬಾಗಿಲು ಒಂದಷ್ಟು ಕಿಟಕಿಗಳಿಂದ ಗಾಳಿ ಹೊರಗೆ ಹೋಗಿ ಒಳಗೆ ಬರೋಕೆ ಒಂದಷ್ಟು ಸ್ಥಳವಕಾಶ ಸಿಗುತ್ತೆ. ಆ ಕೋಣೆಯೊಳಗೆ ಆರಾಮವಾಗಿ ಪ್ರವೇಶಿಸಿ ಮತ್ತೆ ತಿರುಗಿ ಹೋಗಬಹುದು, ಒಳಗೆ ಏನಾದ್ರೂ ಅಮೂಲ್ಯವಾದದಿದ್ದರೆ ಪಡೆದುಕೊಂಡಾದರೂ ಹೋಗಬಹುದು. ಹೊರಗಡೆ ತುಂಬಾ ತೊಂದರೆಯಾಗುತ್ತಿದ್ದರೆ ರಕ್ಷಣೆಯನ್ನು ಪಡೆಯಬಹುದು. ಹೊರಗಡೆಯ ಸುಂದರ ವಾತಾವರಣವನ್ನು ಕಿಟಕಿಯಿಂದ ವೀಕ್ಷಿಸಬಹುದು. ಇದೆಲ್ಲ ಸಾಧ್ಯತೆಗಳಿರುವುದು ಗೋಡೆಗಳೊಂದಿಗೆ ಕಿಟಕಿ ಬಾಗಿಲುಗಳು ಇದ್ದಾಗ ಮಾತ್ರ. ಜೀವನದಲ್ಲಿ ಒಂದಷ್ಟು ಮನಸನ್ನ ಕಿಟಕಿ ಮತ್ತು ಬಾಗಿಲಿನ ತರ ತೆರೆದುಕೊಂಡಿರಬೇಕು. ಆಗ ಒಂದಷ್ಟು ಹೊಸ ವಿಚಾರಗಳು ನಮ್ಮ ಮನಸ್ಸಿನೊಳಗೆ ಬರುತ್ತವೆ. ಅನಗತ್ಯ ವಿಚಾರಗಳನ್ನ ಹೊರಗೆ ಕಳಿಸುತ್ತದೆ. ಬರಿಯ ಗೋಡೆಗಳನ್ನು ಕಟ್ಟಿಕೊಂಡು ನನ್ನದು ನಾನು ಮಾತ್ರ ನನಗೆ ಗೊತ್ತಿರುವುದೇ ಸತ್ಯ, ಇಷ್ಟನ್ನೇ ನಂಬಿಕೊಂಡಿದ್ದರೆ ಜೀವನ ಸಾಗುವುದಿಲ್ಲ. ಹಾಗಾಗಿ ನಮ್ಮ ಜೀವನವೂ ಪೂರ್ತಿಯಾಗಿ ಗೋಡೆಗಳಿಂದ ಆವರಿಸಿಕೊಳ್ಳುವ ಬದಲು ಕಿಟಕಿ-ಬಾಗಿಲುಗಳನ್ನು ಇಟ್ಟುಕೊಂಡು ಬದುಕನ್ನ ಸುಂದರಗೊಳಿಸೋಣ. ಏನಂತೀರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ