ಸ್ಟೇಟಸ್ ಕತೆಗಳು (ಭಾಗ ೪೮೮) - ತಪ್ಪು

ಸ್ಟೇಟಸ್ ಕತೆಗಳು (ಭಾಗ ೪೮೮) - ತಪ್ಪು

ದೇಹದಲ್ಲಿ ಒಂದು ಚೂರು ತ್ರಾಣವಿಲ್ಲ. ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಇಡುವಷ್ಟರಲ್ಲಿ ಹಿಂದಿನ ಕಾಲು ಗೋಗರೆದುಕೊಳ್ಳುತ್ತೆ ಎಲ್ಲಾದರೂ ವಿಶ್ರಾಂತಿ ಪಡೆಯಿರಿ ಅಂತ. ಅಂತಹ ದೇಹವನ್ನು ಹೊಂದಿಕೊಂಡು ದುಡಿಯುವ ಶಕ್ತಿ ಇಲ್ಲದ ಕಾರಣಕ್ಕಾಗಿ ಬೇಡುತ್ತಿದ್ದಾಳೆ. ಮನೆಯವರು ತೊರೆದರೋ ಅಥವಾ ಜೊತೆಗಾರರಿಲ್ಲದೆಯೇ ಗೊತ್ತಿಲ್ಲ. ತುಂಬಾ ಸಮಯದಿಂದ ಏಕಾಂಗಿಯಾಗಿ ಅಲೆಯುತ್ತಿದ್ದಾರೆ. ಯಾರಾದರೂ ನೀಡಿದರೆ ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆ ದಿನ ಸಣ್ಣಪುಟ್ಟ ಕಾಸುಗಳು ಸಂಗ್ರಹವಾಗುತ್ತಾ ಹೋದರೂ ಬೇಕಾದಷ್ಟು ದುಡ್ಡು ಹೊಂದಾಣಿಕೆಯಾಗಿಲ್ಲ. ಆಗಲೇ ದೊಡ್ಡ ಊರಿಗೆ ಹೊರಡುವ ಬಸ್ಸೊಂದು ಅಲ್ಲಿ ನಿಂತಿತ್ತು. ಬಸ್ಸಿನ ಕಿಟಕಿಯ ಬಳಿ ಹೋಗಿ ಬೇಡೋದಕ್ಕೆ ಆರಂಬಿಸಿದರು.ಹೆಜ್ಜೆಗಳು ಕೇಳುತ್ತಿಲ್ಲ ಕಣ್ಣಲ್ಲಿ ನೀರು ತುಂಬಿಕೊಂಡಿದೆ .ಎಲ್ಲರ ಮುಂದೆ ಕೈಯೊಡ್ಡಿ ಬೇಡುತ್ತಿದ್ದಾಳೆ. ಮೂರನೇ ಕಿಟಕಿಯಿಂದ ಒಬ್ಬ ವ್ಯಕ್ತಿ ನೂರರ ನೋಟನ್ನ ಕಿಟಕಿಯಿಂದ ಹೊರಕ್ಕೆ ತೋರಿಸಿದ.ಅಜ್ಜಿಗೆ ಜೀವ ಬಂದಾಗೆ ಆಯಿತು. ದುಡ್ಡು ಸಿಕ್ಕಿದರೆ ನಾಲ್ಕು ದಿನದ ಊಟವನ್ನು ಒಂದೇ ದಿನ ಮಾಡೋಣ ಅಂತಂದುಕೊಂಡ ದೇಹಕ್ಕೆ  ಮತ್ತಷ್ಟು ಚೈತನ್ಯ ಸಿಕ್ಕಿತು .ವೇಗ ವೇಗವಾಗಿ ಹೋಗಿ ಆ ಕಿಟಕಿಯ ಕೆಳಗೆ ನಿಂತಳು ಆಕೆ ಎತ್ತರಕ್ಕೆ ಕಿಟಕಿ ಹತ್ತಿರವಾಗಿ ಇರಲಿಲ್ಲ. ಆಕೆ ಕೈಯೆತ್ತಿ ತಲೆಯೆತ್ತಿ ನಗುತ್ತಾ ಬೇಡಿದಳು. ಒಳಗಿದ್ದ ವ್ಯಕ್ತಿಗೆ ದುಡ್ಡು ಕೊಡುವ ಮನಸ್ಸಿತ್ತೋ ಇಲ್ಲವೋ ಗೊತ್ತಿಲ್ಲ ಆತನು ಅದನ್ನು ಗಟ್ಟಿಯಾಗಿ ಹಿಡಿದು ಅಲ್ಲಾಡಿಸಿದ, ಆತ ಅವಳನ್ನು ಕಾಡಿಸುವುದಕ್ಕೆ ಆರಂಭ ಮಾಡಿದ. ಆ ಕಡೆ ಈ ಕಡೆ ಮುಂದೆ ಹಿಂದೆ ಆಕೆ ಪರದಾಡಿದರು ಹೊಟ್ಟೆ ಕೇಳುತ್ತಿತ್ತು .ಆಕೆ ಎಷ್ಟೇ ಗೋಗರೆದರೂ ಆತ ದುಡ್ಡು ಕೊಡುವ ಸಣ್ಣ ಯೋಚನೆ ಕೂಡ ಮಾಡ್ಲಿಲ್ಲ. ಆಕೆ ಅವನ ಮುಖವನ್ನೊಮ್ಮೆ ನೋಡಿ ತನ್ನ ದುರಾದೃಷ್ಟಕ್ಕೆ ಶಪಿಸುತ್ತಾ ತಲೆ ಕೆಳಗೆ ಹಾಕಿ ಅಲ್ಲಿಂದ ಮುಂದೆ ಚಲಿಸಿ ಬಿಟ್ಟಳು. ಕೊಡುವ ಮನಸ್ಸಿದ್ದರೆ ನೇರವಾಗಿ ಕೊಟ್ಟುಬಿಡಬೇಕು. ಮೋಸ ಮಾಡಿ ಬದುಕುವ ಜಾಯಮಾನ ಅವಳದಾಗಿರಲಿಲ್ಲ. ಹಿರಿಯ ಜೀವವೊಂದನ್ನು ವ್ಯರ್ಥವಾಗಿ ನೋಯಿಸುವುದು ತಪ್ಪು ಆಲ್ವಾ..!

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ