ಸ್ಟೇಟಸ್ ಕತೆಗಳು (ಭಾಗ ೪೯೪) - ದಾರಿ

ಸ್ಟೇಟಸ್ ಕತೆಗಳು (ಭಾಗ ೪೯೪) - ದಾರಿ

ನನ್ನ ಹತ್ತಿರ ಚೈತನ್ಯ ವಿಪರೀತವಿದೆ. ಹಾಗಾಗಿ ನನಗೆ ಗುರಿ ತಲುಪಲು ಅಷ್ಟೇನೂ ಕಷ್ಟ ಅನ್ನಿಸಲಿಕ್ಕಿಲ್ಲ. ನನ್ನ ವೇಗವನ್ನು ಗಮನಿಸಿದರೆ ನೀವು ಯೋಚಿಸಿದಕ್ಕಿಂತ ಎಷ್ಟೋ ದಿನ ಮೊದಲೇ ನಾನು ಗುರಿ ತಲುಪಿ ಬಿಡುತ್ತೇನೆ. ಹೋಗುತ್ತಿರುವ ದಾರಿಯಲ್ಲಿ ಎದುರಾದ ಅಡತಡೆಗಳು ಅದೇನು ಅಷ್ಟು ದೊಡ್ಡದು ಅಂತ ಅನಿಸುವುದಿಲ್ಲ, ಏಕೆಂದರೆ ನನ್ನತ್ರ ತುಂಬಾ ಚೈತನ್ಯವಿದೆ. ಎಲ್ಲವನ್ನು ಎದುರಿಸುವ ಸಾಮರ್ಥ್ಯವೂ ಇದೆ. ನನ್ನಷ್ಟು ಸಾಮರ್ಥ್ಯ ಹೊಂದಿರುವವರು ನನ್ನಷ್ಟು ಆಲೋಚನೆಗಳು ಸೃಜನಶೀಲತೆಯನ್ನು ಹೊಂದಿ ಕೆಲಸ ಮಾಡುವವರು ಇಲ್ಲ ಆದರೆ ಇಲ್ಲಿ ಅವಕಾಶಗಳು ಸಿಗ್ತಾಯಿಲ್ಲ ಅಥವಾ ನಾನು ಗುರಿಯನ್ನ ಬೇಗ ತಲುಪುತ್ತಾನೆ ಇಲ್ಲ. ಯಾರ ಬಳಿ ಹೋಗಿ ಕೇಳಿದರೂ ಎಲ್ಲರೂ ತಮಗೆ ತಿಳಿದದ್ದನ್ನ  ಹೇಳಿ ಮುಂದುವರಿದಿದ್ದಾರೆ. ಕೊನೆಗೆ ನನಗೆ ಅರ್ಥವಾಗಿದ್ದು ಏನೆಂದರೆ ನಾನು ಇಷ್ಟರವರೆಗೆ ಪ್ರಯತ್ನಪಟ್ಟ ದಾರಿಗಳೆಲ್ಲಾ ನನ್ನ ಗೆಲುವಿನ ವಿರುದ್ಧ ದಿಕ್ಕಿನಲ್ಲಿ, ನಾನಿನ್ನೂ ಕೂಡ ನನ್ನ ಗೆಲುವಿನ ಕಡೆಗೆ ಸಾಧಿಸುವಂತಹ ಗುರಿಯ ಕಡೆಗಿನ ಪಯಣವನ್ನಾರಂಭಿಸಿಲ್ಲ. ಅದರ ವಿರುದ್ಧ ದಿಕ್ಕಿನಲ್ಲಿ ನನ್ನ ಎಲ್ಲ ಕೆಲಸವನ್ನು ಮಾಡುತ್ತಾ ಹೋಗಿದ್ದೆ. ಗುರಿಯ ಕಡೆಗೆ ನಾವು ಸಾಗದೇ ಇದ್ದರೆ ಗುರಿಯನ್ನು ತಲುಪೋಕೆ ಆಗುದಿಲ್ಲ. ಕೆಲವೊಂದು ಸಲ ನಾವು ಹೋಗುವ ವೇಗ ಅದ್ಭುತವಾಗಿರುತ್ತದೆ, ಆದರೆ ಆರಿಸಿದ ದಾರಿಗಳು ಬದಲಾಗಿರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ