ಸ್ಟೇಟಸ್ ಕತೆಗಳು (ಭಾಗ ೫೦೭) - ಸಂಪ್ರದಾಯ

ಸ್ಟೇಟಸ್ ಕತೆಗಳು (ಭಾಗ ೫೦೭) - ಸಂಪ್ರದಾಯ

ಆಚರಣೆ ಸಂಪ್ರದಾಯಗಳಿಗೆ ಎಲ್ಲದಕ್ಕೂ ಒಂದೊಂದು ಕಾರಣಗಳಿರುತ್ತವೆ. ಆದರೆ ಕೆಲವೊಂದು ಸಂಪ್ರದಾಯಗಳು ಕಾಲಕ್ರಮೇಣ ಬದಲಾಗಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಯೋಚನೆಯು ಮಾಡದೆ ಹಿಂದಿನವರು ಹೇಗೆ ಮುಂದುವರಿಸಿದರೋ ನಾವು ಹಾಗೆ ಮುಂದುವರಿಸಬೇಕು ಎನ್ನುವ ನಮ್ಮ ಯೋಚನೆ ಎಷ್ಟು ಸರಿ ಅಂತ ನನಗೂ ಗೊತ್ತಿಲ್ಲ. ಹಿಂದೆ ಆ ಕುಟುಂಬಗಳಲ್ಲಿ ಗಂಡು ಮಕ್ಕಳು ಸರಿಯಾದ ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸುತ್ತಿರಲಿಲ್ಲ, ಯಾರೂ ಕೂಡ ಕುಟುಂಬವನ್ನು ನಿರ್ವಹಿಸಬೇಕು ಅನ್ನುವಂತ ಯೋಚನೆಯನ್ನು ಕೂಡ ಮಾಡುತ್ತಿರಲಿಲ್ಲ. ಯಾವುದೋ ಒಂದು ಕೆಲಸ, ದುಡ್ಡಿದ್ರೆ ಸಾಕು ಅನ್ನುವಂತಹ ಯೋಚನೆ ಅಷ್ಟೇ, ಆ ಸಂದರ್ಭದಲ್ಲಿ ಅವರಿಗೆ ಮದುವೆ ಮಾಡಿಕೊಡವಾಗ ಹುಡುಗಿಯ ಮನೆಯವರೆ ಹುಡುಗಿಗೆ ಕಟ್ಟಬೇಕಾದ ತಾಳಿಯನ್ನು ವ್ಯವಸ್ಥೆ ಮಾಡಬೇಕಾಗಿತ್ತು. ಗಂಡು ಕಟ್ಟುವ ತಾಳಿಯನ್ನ ಹೆಣ್ಣು ತಂದು ಕೊಡುವುದು ಇಂತಹ ವಿರೋಧ ಬಾಸ. ಆದರೂ ಆ ಕಾಲಘಟ್ಟದ ಸ್ವಂತ ಕಾಲ ಮೇಲೆ ನಿಲ್ಲದ ಗಂಡು ಮಕ್ಕಳಿಗೋಸ್ಕರ ಈ ಆಚರಣೆಯನ್ನು ತರಲಾಯಿತು. ಕಾಲಕ್ರಮೇಣ ಮುಂದುವರಿಯುತ್ತಾ ಬಂದ ಹಾಗೆ ಗಂಡು ಸ್ವಾಭಿಮಾನದಿಂದ ಸ್ವಂತ ಕಾಲ ಮೇಲೆ ನಿಂತಿದ್ದರೂ ಕೂಡ ಈಗಲೂ ಅದೆಲ್ಲದರ ಖರ್ಚು ವೆಚ್ಚವನ್ನು ಹೆಣ್ಣಿನ ಕುಟುಂಬದವರ ಮೇಲೆ ಹೋರಿಸುತ್ತಿದ್ದಾರೆ. ಈಗ ಬದುಕು ಕಟ್ಟಿಕೊಳ್ಳುವ ಹುಡುಗನಿಗೆ ಯೋಚನೆಗಳು ಮೂಡಬೇಕು. ನಾನು ಕಟ್ಟುವ ತಾಳಿ ಅದು ನನ್ನ ಸ್ವಂತ ಸಂಪಾದನೆಯಿಂದಾಗಬೇಕು, ಹೀಗಾದಾಗ ಒಂದಷ್ಟು ಕುಟುಂಬಗಳ ಖರ್ಚು ವೆಚ್ಚಗಳು ಕಡಿಮೆಯಾಗಬಹುದು. ಸಂಪ್ರದಾಯಗಳು ಬದಲಾಗಬೇಕಾದ ಅನಿವಾರ್ಯ ಘಟ್ಟದಲ್ಲಿ ನಾವಿದ್ದರೂ ನಾವದನ್ನ ಗಮನಿಸದೇ ಇರುವುದು ವಿಪರ್ಯಾಸ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ