ಸ್ಟೇಟಸ್ ಕತೆಗಳು (ಭಾಗ ೫೦೮) - ಅರ್ಥ

ಸ್ಟೇಟಸ್ ಕತೆಗಳು (ಭಾಗ ೫೦೮) - ಅರ್ಥ

ಸಭೆ ಆರಂಭವಾಗಿತ್ತು. ಕರೆದದ್ದು ಯಾಕೆ ಅನ್ನೋದು ಅಲ್ಲಿದ್ದ ಯಾರಿಗೂ ಅಷ್ಟು ನಿಖರವಾಗಿ ಗೊತ್ತಿರ್ಲಿಲ್ಲ. ಸಭೆಯೊಳಗೆ ಬಂದು ಕೂತ ಪ್ರತಿಯೊಬ್ಬರಿಗೂ ತಮ್ಮದೇ ವಿಚಾರ ಇವತ್ತು ಸಭೆಯಲ್ಲಿ ಮಾತುಕತೆಗೆ ಬರುತ್ತದೆ ಅಂತ ಅಂದುಕೊಂಡು ಬಿಟ್ಟಿದ್ದರು. ಸಭೆಗೆ ಬಂದ ಮುಖ್ಯಸ್ಥರು ಮಾತು ಆರಂಭಿಸಿದಾಗ ಪ್ರತಿಯೊಂದು ವಿಚಾರವನ್ನು ಕೂಲಂಕುಶವಾಗಿ ವಿವರಣೆಯಿಂದ ಎಲ್ಲೂ ಕೂಡ ಹಳಿತಪ್ಪದಂತೆ ಸರಿಯಾಗಿ ವಿವರಿಸುವುದಕ್ಕೆ ಆರಂಭ ಮಾಡಿದರು. ಅವರ ಮಾತು ಮುಂದುವರಿಯುತ್ತಿದ್ದ ಹಾಗೆ ಅದರೊಳಗಿನ ಆಲೋಚನೆ, ಅವರ ಕನಸುಗಳು, ಅವರ ಕೆಲಸದ ರೀತಿ ಮನವರಿಕೆಯಾಗುವುದಕ್ಕೆ ಆರಂಭವಾಗಿದ್ದವು. ಕೆಲವೊಂದು ಸಲ ಬಾಗಿಲು ತೆರೆಯದೆ ಮನೆ ಒಳಗೆ ಬರುವುದು ಅಂತಂದ್ರೆ ಕಷ್ಟ ಆಗುತ್ತೆ ಹಾಗೆ ಮನಸ್ಸು ತೆರೆಯದೆ ವಿಚಾರಗಳು ಒಳಗೆ ಹೋಗೋದಿಲ್ಲ. ಒಂದಷ್ಟು ತಪ್ಪುಗಳನ್ನು ವಿವರಿಸುತ್ತಾ ಹೋದ ಹಾಗೆ ಪ್ರತಿಯೊಬ್ಬರಿಗೂ ಅದು ಅವರದೇ ತಪ್ಪು ಎಂಬಂತೆ ಯೋಚನೆಗಳು ಮೂಡಲಾರಂಭಿಸಿದವು. ಕೆಲವು ಒಬ್ಬರಿಗೆ  ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತಹ ಯೋಚನೆ ಮೂಡಿದೆ. ಆದರೆ ಮುಖ್ಯಸ್ಥರ ಮಾತು ಎಲ್ಲರಿಗೂ ಸೇರಿದ್ದು ಯಾರೊಬ್ಬರಿಗೂ ವೈಯಕ್ತಿಕವಾಗಿ ಅಲ್ಲ.  ಸಂದರ್ಭ ಕೆಲವೊಂದು ಸಲ ಮಾತುಗಳು ವಿಶಾಲವಾಗಿದ್ದರೂ ಅರ್ಥೈಸಿಕೊಳ್ಳುವವರು ಅವರವರ ಚೌಕಟ್ಟಿನ ಒಳಗೆ ಅದರ ಅರ್ಥವನ್ನು ತೆಗೆದುಕೊಂಡು ಬಂದು ಅರ್ಥೈಸಿಕೊಳ್ಳುತ್ತಾರೆ. ಅದು ಅವರವರ ವಿವೇಚನೆಗೆ ಬಿಟ್ಟದ್ದು ಮುಖ್ಯಸ್ಥರ ಮಾತಿನೊಳಗಿನ ಸಾರಾಂಶ ಅರ್ಥವಾಗಿ ಅದರಂತೆ ನಡೆದರೆ ಸಾಕು ಹಾಗೆ ಬದುಕಿನ ದಾರಿಗೂ ಒಂದಷ್ಟು ವಿವೇಚನೆಯ ಯೋಚನೆ ಅಗತ್ಯವಿದೆ ನಮ್ಮ ಚೌಕಟ್ಟಿನೊಳಗೆ ಅರ್ಥೈಸಿಕೊಂಡು ಮುಂದುವರೆದರೆ ಬದುಕು ಬಂಗಾರವಾಗುತ್ತದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ