ಸ್ಟೇಟಸ್ ಕತೆಗಳು (ಭಾಗ ೫೧೧) - ನಿಮಗರ್ಥವಾಗುತ್ತದೆ !
ಆ ಒಂದು ದಿನ ನಿಮಗರ್ಥವಾಗುತ್ತದೆ. ಅವತ್ತು ನಾನು ಹಾಗೇಕೆ ಮಾಡಿದೆನೆಂದು. ಹಾಗೆ ಮಾತನಾಡಿದನೆಂದು, ತಿಳಿದ ನಾನು ಹೇಗೆ ಇರುತ್ತೇನೆ ಅನ್ನುವುದರ ಅರಿವು ನನಗೆ ಇಲ್ಲ. ನನ್ನ ಸನ್ನಿವೇಶದಲ್ಲಿ ನೀವಿರಲಿಲ್ಲ. ನನ್ನ ವರ್ತನೆಗೆ ಕಾರಣ ನಿಮಗೆ ತಿಳಿದಿರಲಿಲ್ಲ,ಆದರೂ ನೀವು ನಿಮ್ಮದೇ ಅರ್ಥಲೋಕವನ್ನ ಸೃಷ್ಟಿಸಿ ಉತ್ತರಿಸಿದಿರಿ. ಸುತ್ತ ಮುತ್ತ ಯಾರಿದ್ದಾರೆ ಅನ್ನುವುದರ ಅರಿವು ನಿಮಗೆ ಆಗ ಆಗಿರಲಿಲ್ಲ ಅನ್ನಿಸುತ್ತದೆ. ಭವಿಷ್ಯದ ಬಗ್ಗೆ ನನ್ನ ಯೋಚನೆಗಳೇನು ಅನ್ನುವುದರ ಸಣ್ಣ ಯೋಚನೆಯೂ ನಿಮಗಿರಲಿಲ್ಲವಾದ್ದರಿಂದ ನಾನೇಕೆ ಹಾಗೆ ವರ್ತಿಸಿದೆ, ಮಾತನಾಡಿದೆ, ಉತ್ತರಿಸಿದೆ, ಮೌನವಾದೆ, ತಪ್ಪಿಸಿಕೊಂಡೆ, ಜಗಳವಾಡಿದೆ, ದ್ವೇಷಿಸಿದೆ, ಪ್ರೀತಿಸಿದೆ. ಎಲ್ಲದ್ದಕ್ಕೂ ಕಾರಣವಿದೆ. ಅದು ನನಗೆ ಮಾತ್ರ ಗೊತ್ತು. ಎಲ್ಲದ್ದಕ್ಕೂ ಉತ್ತರ ಕೊಡಲಾಗುವುದಿಲ್ಲ... ಆದರೂ ಒಂದು ದಿನ ನಿಮಗರ್ಥವಾಗುತ್ತದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ