ಸ್ಟೇಟಸ್ ಕತೆಗಳು (ಭಾಗ ೫೩೩) - ಆಲೋಚನೆ

ಸ್ಟೇಟಸ್ ಕತೆಗಳು (ಭಾಗ ೫೩೩) - ಆಲೋಚನೆ

ಅವರಿಗೆ ಮಗನ ಒಂದೆರಡು ಚಟುವಟಿಕೆಗಳ ಬಗ್ಗೆ ಒಂದಷ್ಟು ಸುದ್ದಿ ಗೊತ್ತಾಗಿದೆ ಅವರ ಅಂದುಕೊಂಡಿದ್ದಾರೆ, ಮಗನ ಆ ಚಟುವಟಿಕೆಗಳ ಬಗ್ಗೆ ಸುದ್ದಿ ತನಗೆ ಗೊತ್ತಾಗಿರುವುದು ಮಗನಿಗೆ ಗೊತ್ತಿಲ್ಲ ಅಂತ ಆದರೆ ನಿಜವಾಗಿ ಮಗನಿಗೂ ಅಮ್ಮನಿಗೂ ವಿಚಾರ ಗೊತ್ತಾಗಿದೆ ಅನ್ನುವಂತಹ ಸುದ್ದಿ ತಿಳಿದಿದೆ. ಅಮ್ಮನ ಮನಸ್ಸಿನಲ್ಲಿ ಪ್ರಶ್ನೆಗಳ ಪಟ್ಟಿ ತಯಾರಾಗ್ತಾ ಇದೆ ಯಾವ ಪ್ರಶ್ನೆಯನ್ನು ಮೊದಲು ಇಡಬೇಕು, ಅದಕ್ಕೆ ಏನು ಉತ್ತರ ಬರಬಹುದು ಆ ಉತ್ತರದಿಂದ ಇನ್ನೊಂದು ಪ್ರಶ್ನೆಯನ್ನ ಹೇಗೆ ತಯಾರು ಮಾಡಬೇಕು? ಯಾವ ಪ್ರಶ್ನೆಯನ್ನು ನಿಜವಾಗಿ ಆರಂಭ ಮಾಡಿದರೆ ನಾನಂದುಕೊಂಡ ನಿಜ ಉತ್ತರ ಸಿಗುವುದಕ್ಕೆ ಸಾಧ್ಯ? ಅಂತ ಅಮ್ಮ ಯೋಚನೆ ಮಾಡ್ತಾ ಇದ್ದಾರೆ. ಅಮ್ಮನ ಯೋಚನೆಯಲ್ಲೇನೂ ತಪ್ಪಿಲ್ಲ, ಏಕೆಂದರೆ ನಿಜವಾದ ಉತ್ತರವನ್ನ ಪಡೆದುಕೊಳ್ಳುವ ಯೋಚನೆಯಿಂದ ಅಮ್ಮ ಈ ಕೆಲಸ ಮಾಡ್ತಾ ಇದ್ದಾರೆ ದಿನ ಮಾತ್ರ ಎಂದಿನಂತೆ ಹೋಗ್ತಾ ಇದೆ. ಅವಳ ಯಾವುದೇ ಸಣ್ಣ ಚಟುವಟಿಕೆಯಲ್ಲೂ ಬದಲಾವಣೆ ಕಾಣುತ್ತಿಲ್ಲ. ಇನ್ನೊಂದು ಕಡೆ ಮನೆ ಮಗ ಉತ್ತರಗಳ ಮೂಟೆಗಳನ್ನ ತಯಾರು ಮಾಡ್ತಾ ಇದ್ದಾನೆ. ಅಮ್ಮನ ಮುಂದೆ ಸತ್ಯವನ್ನ ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ ಹಾಗಾಗಿ ಸುಳ್ಳುಗಳ ಪಟ್ಟಿಗಳನ್ನು ತಯಾರಿ ಮಾಡ್ತಾ ಇದ್ದಾನೆ. ಪಟ್ಟಿಗಳು ತಯಾರಾದರೆ ಸಾಕಾಗೋದಿಲ್ಲ ಆ ಪಟ್ಟಿಗಳಿಗೆ ಒಂದಷ್ಟು ಸಾಕ್ಷಿಗಳನ್ನು ತಯಾರಿ ಮಾಡಬೇಕು ಅಮ್ಮ ಅಂದುಕೊಂಡಿರುವುದು ಸುಳ್ಳು ನಿಜವಾಗಿಯೂ ನಡೆದದ್ದು ಏನು ಅನ್ನೋದನ್ನ ಅಮ್ಮನ ಮುಂದೆ ಒಪ್ಪಿಸಬೇಕು. ಅಮ್ಮ ಯಾವ ಪ್ರಶ್ನೆಯನ್ನ ಕೇಳಿದರೆ ಯಾವ ಉತ್ತರವನ್ನು ನೀಡಬೇಕು ಅನ್ನೋ ಯೋಚನೆ ಮಾಡಿ ಅದಕ್ಕೆ ಉತ್ತರಗಳನ್ನು ಮಾಡಿಟ್ಟುಕೊಂಡಿದ್ದಾನೆ. ಒಟ್ಟಿನಲ್ಲಿ ಇಲ್ಲಿ ಪ್ರಶ್ನೋತ್ತರಗಳು ನಡೆಯುತ್ತಿಲ್ಲ. ಅವರವರು ಅವರವರ ಸನ್ನಿವೇಶವನ್ನ ನಿಭಾಯಿಸಬೇಕಾಗಿದೆ ಇನ್ನೊಬ್ಬರು ಆರಂಭ ಮಾಡಿದ್ರೆ ಅದನ್ನ ಅಂತ್ಯ ಹೇಗೆ ಮಾಡಬೇಕು ಅನ್ನೋದನ್ನ ಯೋಚಿಸುತ್ತಿದ್ದಾರೆ. ಅವರ ಆ ಸಮಯಕ್ಕೆ ಆ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ನಿಭಾಯಿಸುವುದಕ್ಕೆ ನಿಂತುಬಿಟ್ಟಿದ್ದಾರೆ ಮುಂದೇನಾಗುತ್ತೆ ಅನ್ನೋದು ಅವರಿಬ್ಬರೂ ಮಾತನಾಡಿದ ನಂತರವೇ ತಿಳಿಯಬೇಕಾಗುತ್ತದೆ ಹಾಗಾಗಿ ನೀವು ಕಾಯುವ ಹಾಗೆ ನಾನು ಕಾಯ್ಲೇಬೇಕು ಬೇರೇನೂ ಮಾಡುವ ಹಾಗಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ