ಸ್ಟೇಟಸ್ ಕತೆಗಳು (ಭಾಗ ೫೩೪) - ಗಡಿಯಾರ

ಸ್ಟೇಟಸ್ ಕತೆಗಳು (ಭಾಗ ೫೩೪) - ಗಡಿಯಾರ

ಗಡಿಯಾರಗಳೆಲ್ಲಾ ಊರು ಬಿಟ್ಟು ಹೊರಟಿವೆ. ಇರುವ ಜಾಗದಲ್ಲೆಲ್ಲಾ ಅವುಗಳ ಬಗ್ಗೆ ಕಿಂಚಿತ್ತೂ ಗೌರವವವಿಲ್ಲ, ಗೌರವವಿಲ್ಲದ ಜಾಗದಲ್ಲಿ ಇದ್ದು ಮಾಡುವುದೇನು? ಒಟ್ಟಾರೆಯಾಗಿ ಬಳಸುವವರೇ...ತಮ್ಮದೇ  ಆಸ್ತಿ ಎನ್ನುವ ರೀತಿಯಲ್ಲಿ ಬಳಸುತ್ತಿದ್ದಾರೆ. ಅಲ್ಲ ಇಲ್ಲೊಂದು ಯೋಚನೆ, ಊರಲ್ಲಿರೋ ಸಮಯ ಸಾಧನಗಳೆಲ್ಲಾ ನೋವಿನಿಂದ ಊರು ಬಿಟ್ಟರೆ ಬದುಕೋದು ಹೇಗೆ ಸ್ವಾಮಿ. ಕಳೆದುಕೊಂಡ ಮೇಲೆ ಯೋಚಿಸುವುದಕ್ಕಿಂತ ಈಗಲೇ ಎಚ್ಚರವಾಗೋದು ಒಳ್ಳೆಯದು. ಊರು ಬಿಟ್ಟ ಗಡಿಯಾರಗಳನ್ನೆಲ್ಲಾ ಸಮಾಧಾನ ಮಾಡಿ ಮರಳಿ ತಂದಿದ್ದೇನೆ. ಇನ್ನಾದರೂ ನಮಗೊಂದಿಷ್ಟು ಜವಾಬ್ದಾರಿ ಇರಲಿ. ಸಮಯ ಪಾಲಿಸುವುದ್ದಕ್ಕೆ ಇರೋದು. ಕಾಯಿಸುವುದಕ್ಕಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ