ಸ್ಟೇಟಸ್ ಕತೆಗಳು (ಭಾಗ ೫೩೫) - ಮೈಲಿಗಲ್ಲು

ಸ್ಟೇಟಸ್ ಕತೆಗಳು (ಭಾಗ ೫೩೫) - ಮೈಲಿಗಲ್ಲು

ನಾನು ಹೋಗುತ್ತಿರುವ ದಾರಿಯಲ್ಲಿ ಒಂದೂ ಮೈಲುಗಲುಗಳಿಲ್ಲ, ಹಾಗಿದ್ದರೆ ಅದು ಕಷ್ಟವಲ್ವಾ? ಈ ಮೈಲಿಗಲ್ಲಿನ ಅವಶ್ಯಕತೆ ತುಂಬಾ ಇದೆ. ಎಷ್ಟು ದೂರ ತಲುಪಿದ್ದೇನೆ ಅನ್ನೋದನ್ನ ಈ ಮೈಲಿಗಲ್ಲು ನೆನಪಿಸುತ್ತದೆ, ಜೊತೆಗೆ ತಲುಪೋದಕ್ಕೆ ಎಷ್ಟು ದೂರ ಇದೆ ಅನ್ನೋದನ್ನ ಕೂಡ ಮೈಲಿಗಲ್ಲು ನೆನಪಿಸಿಕೊಡುತ್ತವೆ. ಕೆಲವೊಂದು ಸಲ ದಾರಿ ತಪ್ಪಿದರೂ ಕೂಡ ಮೈಲಿಗಲ್ಲುಗಳು ಸಿಕ್ಕೇ ಸಿಗುತ್ತವೆ. ಆದರೆ ಆ ಮೈಲಿಗಲ್ಲುಗಳು ನಾವು ಆರಂಭ ಮಾಡುವಾಗ ಎಲ್ಲಿಗೆ ತಲುಪಬೇಕು ಅಂತ ನಿರ್ಧರಿಸಿದ್ದೆವೋ ಅಲ್ಲಿಗೆ ಸಾಗಬೇಕು ಎಂದೇನೂ ಇಲ್ಲ. ಕೆಲವೊಂದು ಸಲ ನಮ್ಮ ಯೋಚನೆಗಿಂತಲೂ ಅದ್ಭುತವಾದ ಜೀವನವೇ ಬದಲಾಗುವಂತಹ ಮೈಲುಗಲ್ಲುಗಳು ಸಿಗಬಹುದು ಅಥವಾ ವ್ಯರ್ಥವಾದ ಮೈಲುಗಲ್ಲುಗಳು ಎದುರಾಗಬಹುದು. ಪ್ರತಿಯೊಂದು ಮೈಲುಗಲ್ಲುಗಳಲ್ಲಿ ಒಮ್ಮೆ ನಿಂತು ಬಂದ ದಾರಿಯನ್ನ ಹೋಗಬೇಕಾದ ದಾರಿಯನ್ನ ನೋಡಿ ಮುಂದುವರಿಯಬೇಕು. ಮೈಲಿಗಲ್ಲುಗಳು ಬೇಕೇ ಬೇಕು ಇಲ್ಲವಾದರೆ ಜೀವನಕ್ಕೊಂದು ಅರ್ಥವೇ ಇರೋದಿಲ್ಲ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ