ಸ್ಟೇಟಸ್ ಕತೆಗಳು (ಭಾಗ ೫೩೮) - ಮರದ ಕತೆ

ಸ್ಟೇಟಸ್ ಕತೆಗಳು (ಭಾಗ ೫೩೮) - ಮರದ ಕತೆ

ಕಾಲೇಜಿನ ಹಿಂದಿನ ಮಾವಿನ ಮರ ಹೂವು ಬಿಟ್ಟು ಹಣ್ಣುಗಳನ್ನು ಹಂಚೋಕೆ ತಯಾರಾಗಿತ್ತು. ಇದೇನೋ ಮಾವಿನ ಹಣ್ಣಿನ ಕಾಲವಲ್ಲ ಅದ್ಯಾಕೋ ಗೊತ್ತಿಲ್ಲ ಮಾವಿನ ಮರಕ್ಕೆ ಸಮಾಜಕ್ಕೇನೋ ನೀಡಬೇಕು ಅಂತ ಅನ್ನಿಸಿರಬೇಕು. ಹೂವುಗಳನ್ನ ತುಂಬಾ ಹರಡಿ ,ಅದರಲ್ಲಿ ಒಂದಷ್ಟು ಹೂವುಗಳು ಗೊಂಚಲು ಗೊಂಚಲಾಗಿ ಮಿಡಿಗಳನ್ನು ತುಂಬಿಕೊಳ್ಳಲಾರಂಭಿಸಿತು. ಅಷ್ಟು ಹಣ್ಣುಗಳನ್ನು ಉಳಿಸಿಕೊಂಡರೆ ಹೆಚ್ಚು ಜನರಿಗೆ ಮಾವಿನಹಣ್ಣನ್ನು ತಲುಪಿಸಬಹುದು ಆದರೆ ಮರ ಹಾಗೆ ಮಾಡ್ಲಿಲ್ಲ. ಜೋರಾದ ಗಾಳಿಗಳನ್ನ ತನ್ನ ಮೈ ಮೇಲೆ ಎಳೆದುಕೊಂಡು ದಿನದಲ್ಲಿ ಎರಡು ಮೂರು ಸಲ ಕೊಸರಾಡಿ ನಿಲ್ಲುತ್ತಿತ್ತು. ಹಾಗೆ ನಿಂತಾಗ ಒಂದಷ್ಟು ಮಿಡಿಗಳು ನೆಲಕ್ಕೆ ಬಿದ್ದು ಹೋದವು. ಇದ್ಯಾಕ್ ಮರ ಹೀಗೆ ಗಾಳಿಗಳನ್ನ ತನ್ನ ಮೈ ಮೇಲೆ ಎಳೆದುಕೊಳ್ಳುತ್ತಿದೆ ಅಂತ ಅಂದರೆ ಕೊನೆಯವರೆಗೂ ಗಟ್ಟಿಯಾಗಿ ನಿಂತು ಬೇರು ಹೀರಿದ ಎಲ್ಲ ಪೌಷ್ಟಿಕಾಂಶಗಳನ್ನು ತನ್ನೊಳಗೆ ತುಂಬಿಕೊಂಡು ಜನರಿಗೆ ತಲುಪಿಸುವಂತಹ ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಯೋಗ್ಯ ವಾಗುವಂತಹ ಹಣ್ಣುಗಳು ಮಾತ್ರ ಉಳಿಯಬೇಕು ಎನ್ನುವುದು ಆ ಮರದ ನಿಲುವು ಹಾಗಾಗಿ ಒಂದಷ್ಟು ವ್ಯರ್ಥ ಮಿಡಿಗಳನ್ನು ಉದುರಿಸಿ ಉಪಯೋಗವಾಗುವುದನ್ನ ಮಾತ್ರ ಇಟ್ಟುಕೊಂಡಿತು. ಮರ ಮಾಡಿದ ಹಾಗೆ ನಾವು ನಮ್ಮಲ್ಲಿರುವ ಒಂದಷ್ಟು ದುರ್ಗುಣಗಳು ಉಪಯೋಗವಿಲ್ಲದ ವಿಚಾರಗಳನ್ನ ಕೊಡವಿ ತೊಡೆದು ಹಾಕಿ ಸತ್ವಯುತವಾದವುಗಳನ್ನ ಮಾತ್ರ ನಮ್ಮೊಳಗೆ ಅನುಭವಿಸಿಕೊಂಡು  ಆವಿರ್ಭವಿಸಿಕೊಂಡು ಬದುಕಬೇಕು. ಕಲಿಯೋದಕ್ಕೆ ಎಲ್ಲಾ ಕಡೆ ಇದೆ ಕಣ್ಣು ಬಿಟ್ಟು ನೋಡಬೇಕಷ್ಟೇ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ