ಸ್ಟೇಟಸ್ ಕತೆಗಳು (ಭಾಗ ೫೪೦) - ದಾರಿ

ಸ್ಟೇಟಸ್ ಕತೆಗಳು (ಭಾಗ ೫೪೦) - ದಾರಿ

ರಸ್ತೆಯ ಮೇಲೊಂದು ನಾಯಿ ಸತ್ತು ಬಿದ್ದಿದೆ. ಆ ನಾಯಿಯ ಸಾವಿಗೆ ಕಾರಣ ಯಾವುದೋ ಒಂದು ಗಾಡಿ. ಅವನಿಗೆ ನಾಯಿಯ ಜೀವ ಅಷ್ಟೇನೂ ಮುಖ್ಯ ಅನ್ನಿಸಲಿಲ್ಲ. ಅದರ ನಂತರ ಅದೇ ರಸ್ತೆಯಲ್ಲಿ ಹಾದುಹೋದ ಅಷ್ಟು ಗಾಡಿಗಳು ನಾಯಿಯ ದೇಹವನ್ನು ಮತ್ತಷ್ಟು ನಜ್ಜುಗುಜ್ಜು ಮಾಡಿ ಮುಂದುವರೆದು ಬಿಟ್ಟವು ಚಲಿಸುತ್ತಿದ್ದ ಎಲ್ಲಾ ಚಕ್ರಗಳಿಗೂ ಅರಿವಿತ್ತು ತಾವು ಮಾಡುತ್ತಿರುವ ಕೆಲಸ ಏನು ಅನ್ನುವುದರ ಬಗ್ಗೆ. ಯಾರೂ ಕೂಡ ಆ ನಾಯಿಯ ಸಾವಿನ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ನಾಯಿಯ ಬದುಕಿನ ಬಗ್ಗೆ, ಜೀವ ಬಿದ್ದಾಗ ಅದು ಮಾಡಿದ ಕೆಲಸಗಳ ಬಗ್ಗೆ ಯಾರಿಗೂ ಯೋಚನೆ ಕೂಡ ಬರಲೇ ಇಲ್ಲ. ಎರಡು ದಿನಗಳಲ್ಲಿ ಆ ನಾಯಿಯ ದೇಹ ರಸ್ತೆಗೆ ಅಂಟಿಕೊಂಡುಬಿಟ್ಟಿತು. ಕೊನೆಗೊಂದು ದಿನ ಎಲ್ಲೋ ಮೂಲೆಗೆ ಸೇರಿ ನಾಯಿಯ ಕಥೆ ಅಲ್ಲಿಗೆ ಮುಗಿದಿತ್ತು. ಹಲವು ಕನಸುಗಳನ್ನು ಕಂಡು ಏನೇನೋ ಯೋಚನೆಗಳನ್ನು ಮಾಡಿಕೊಂಡಿದ್ದು ಏನು ಅದು ನಾಯಿಗೆ ಮಾತ್ರ ಗೊತ್ತು ಆದ್ರೆ ಅದೇ ತರಹದ ಬದುಕು ನಮ್ಮ ಸುತ್ತಮುತ್ತನ್ನು ಕಂಡು ಬರ್ತಾ ಇದೆ .ಮುಂದಿನಿಂದ ಪಕ್ಕದಲ್ಲಿ ಹಾದು ಹೋಗುವವರು ಅವರವರ ಕೆಲಸಗಳನ್ನು ಗಮನಿಸುತ್ತಾರೆ ವಿನಃ ಜೊತೆಗಿರುವವನಿಗೆ ಏನಾಗಿದೆ ಹೇಗಿದ್ದಾನೆ ಅನ್ನುವ ವಿಚಾರಣೆ ಕೂಡ ಇಲ್ಲಿಲ್ಲ. ಪ್ರತಿಯೊಬ್ಬರಿಗೂ ಅವರು ಬದುಕಬೇಕಷ್ಟೇ ನಾವು ಕೂಡ ಎಲ್ಲರ ತರಹ ಹಾದು ಹೋಗುವ ಗಾಡಿ ಆಗಿ ಬಿಡಬಾರದು ಒಂದು ಸಲ ಸುತ್ತ ಕಣ್ಣಾಡಿಸಿ ಬದುಕಿನ ಅವಶ್ಯಕತೆಗೆ ಒದ್ದಾಡುತ್ತಿರುವವರ ಜೊತೆಯಾಗಿ ಅವರನ್ನು ದಡ ಸೇರಿಸುವುದು ತುಂಬಾ ಶ್ರೇಷ್ಠವಾದ ಕೆಲಸ ಅಂತ ಅನ್ನಿಸ್ತದೆ. ಹಾಗಾಗಿ ನಮ್ಮದೇ ಹೊಸ ದಾರಿ ಒಂದಷ್ಟು ನಂಬಿಕೆಗಳಿಂದ ಮುಂದುವರಿಯಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ