ಸ್ಟೇಟಸ್ ಕತೆಗಳು (ಭಾಗ ೫೬೮) - ಸೇರೋದ್ಯಾಕೆ?
ಯಾವುದೂ ಕೂಡ ತುಂಬಾ ದಿನ ಇದ್ದ ಹಾಗೆ ಇರೋದಿಲ್ಲ. ಸರಪಳಿಗಳು ಕೆಲವೊಂದು ಸಲ ಒಂದಷ್ಟು ಹೊಡೆತಗಳಿಗೆ ಜಗ್ಗಿ ಬಿಗಿಯಾಗಿರುವ ಕೊಂಡಿ ಕಳಚೋದಕ್ಕೆ ಆರಂಭವಾಗುತ್ತದೆ. ಜೋಡಣೆಯಾಗಿರೋದು ಬಿಚ್ಚಿ ಹೋಗುತ್ತದೆ. ಇದು ಕಾಲಕ್ರಮೇಣ ಯಾವುದೇ ಚಟುವಟಿಕೆ ಇಲ್ಲದೆ ಸ್ಥಿರವಾಗಿದ್ದು ಅದಕ್ಕೆ ಆಗಾಗ ಅದನ್ನ ಪರೀಕ್ಷಿಸುತ್ತಿರಬೇಕು. ಅದಕ್ಕೆ ಬೇಕಾಗಿರುವ ಒಂದಷ್ಟು ಕೆಲಸಗಳನ್ನು ಮಾಡಿದರೆ ಕೊಂಡಿ ಬಿಗಿಯಾಗಿರುತ್ತದೆ. ಇದನ್ನು ಓದುತ್ತಿದ್ದ ಶಾಮರಾಯರಿಗೆ ಅರ್ಥವಾಗಿ ಹೋಯಿತು ಇಷ್ಟು ದಿನದವರೆಗೆ, ಒಬ್ಬನೇ ಬದುಕಿ ಬಿಡುತ್ತೇನೆ, ಜೊತೆಗಾರರು ಯಾರೂ ಬೇಕಾಗಿಲ್ಲ, ಅಂತ ಅಂದುಕೊಂಡಿದ್ದವರು. ಹಲವಾರು ವೈಮನಸ್ಸುಗಳು, ಸಿಟ್ಟುಗಳು ಇವೆಲ್ಲವನ್ನ ತೊರೆದು ಜೊತೆಯಾಗಿ ಬದುಕುವುದಕ್ಕೆ ಮತ್ತೆ ಒಂದಾಗಬೇಕು ಅನ್ನುವಂತ ಯೋಚನೆ ಮಾಡಿ ಕುಟುಂಬದ ದೈವಕ್ಕೆ ಪ್ರಾರ್ಥನೆಗಾಗಿ ಎಲ್ಲರನ್ನು ಸೇರಿಸಿದರು .ಊರು ಬಿಟ್ಟವರು, ಓದಿಗೆ ತೆರಳಿದವರು, ದೂರವಾದವರು, ಸಿಟ್ಟಲ್ಲಿದ್ದವರು, ತುರ್ತಿನಲ್ಲಿದ್ದವರು ಎಲ್ಲರೂ ಕೂಡ ಈ ಕಾರ್ಯಕ್ಕೆ ಸೇರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗಾಗಿ ಬಂದವರು ಪ್ರತಿಯೊಬ್ಬರನ್ನ ಮಾತನಾಡುತ್ತಾ ಮಾತನಾಡುತ್ತಾ ಆತ್ಮೀಯರೆನಿಸಿಕೊಂಡರು ಇಷ್ಟು ದಿನ ಏನನ್ನ ಕಳೆದುಕೊಂಡಿದ್ದೇವೆ ಎನ್ನುವುದರ ಅರಿವು ಅವರಿಗಾಯಿತು. ಕಳಚುವಂಥ ಕೊಂಡಿಗಳೆಲ್ಲ ಮತ್ತೆ ಬಿಗಿಯಾಗಿ ಸೇರಿಕೊಂಡವು. ಬದುಕು ಇನ್ನಷ್ಟು ಸುಂದರವಾಯಿತು. ಹೊಸ ಅವಕಾಶಗಳು ತೆರೆಯಿತು ಕೆಲಸ ಹುಡುಕುತ್ತಿದ್ದವರಿಗೆ ಹೊಸ ತಂದು ಕೆಲಸವೂ ಸಿಕ್ಕಿತು, ಹಲವಾರು ಸಮಸ್ಯೆಗಳು ಆ ಒಂದು ದಿನದ ಭೇಟಿಯಲ್ಲಿ ಬದಲಾದವು. ಎಲ್ಲರೂ ದೇವರಿಗೆ ಕೈ ಮುಗಿದು ಪ್ರಾರ್ಥಿಸಿದರು. ಆ ದೇವರು ಮೇಲೆಯೇ ನಿಂತು ಇವರನ್ನು ನೋಡಿ ನಗುತ್ತಾ "ವರ್ಷಕ್ಕೊಂದು ಸಲವಾದರೂ ಬಂದು ಕೈ ಮುಗಿದು ಜೊತೆಗೆ ನಿಂತು ಪ್ರಾರ್ಥಿಸಿ ಅಂತ ಅಂದಿನಿಂದ ಇಂದಿನವರೆಗೂ ಹೇಳುತ್ತಾ ಬಂದರು ನಿಮಗೆ ಯಾರಿಗೂ ಕೇಳಲೇ ಇಲ್ಲ ಅದಕ್ಕೆ ಹೇಳಿರೋದು ಹಿರಿಯರು ಮಾಡಿರೋದ್ರಲ್ಲಿ ಒಂದು ಅರ್ಥ ಇದೆ ಅದನ್ನ ಮುಂದುವರೆಸಿಕೊಂಡು ಹೋಗಿ ಮೇಲೆ ನಿಂತು ಖುಷಿ ಪಟ್ಟರು. ಶ್ಯಾಮರಾಯರು ತೃಪ್ತಿಗೊಂಡರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ