ಸ್ಟೇಟಸ್ ಕತೆಗಳು (ಭಾಗ ೫೮೧) - ಸನ್ನಿವೇಶ
ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ ಯಾವುದನ್ನು ಮನಃಸ್ಪೂರ್ತಿಯಾಗಿ ಅನುಭವಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾ ಸಮಯದವರೆಗೆ ಯಾವುದೂ ನನ್ನ ಜೊತೆ ನಿಲ್ತಾನೆ ಇಲ್ಲ."
ಉತ್ತರ- "ನೋಡು ಈ ಕಾರ್ಯಕ್ರಮಗಳಿಗೆ ಅಂತ ಶಾಮಿಯಾನ, ಪಾತ್ರೆಗಳು ಇರುತ್ತವೆ. ಪಾತ್ರೆಗಳು ಕುರ್ಚಿ ಟೇಬಲ್ ಗಳು ಇರ್ತವೆ. ಆ ಅಂಗಡಿಯ ಮುಖ್ಯಸ್ಥ ಎಲ್ಲಾ ಕಾರ್ಯಕ್ರಮಗಳಿಗೂ ಅದೇ ಟೇಬಲ್, ಅದೇ ಕುರ್ಚಿ, ಅದೇ ಪಾತ್ರೆಗಳನ್ನ ಕಳುಹಿಸಿಕೊಡುತ್ತಾನೆ. ಆ ಕುರ್ಚಿಯ ಮೇಲೆ ಕುಳಿತುಕೊಳ್ಳುವವರು ಸಿಟ್ಟಿನಲ್ಲಿರಬಹುದು, ನೋವಿನಲ್ಲಿರಬಹುದು, ಚಿಂತೆಯ ಮಡುವಿನಲ್ಲಿರಬಹುದು, ಖುಷಿಯ ಅಮಲಿನಲ್ಲಿ ತೇಲುತ್ತಿರಬಹುದು. ಆ ಕುರ್ಚಿ ತನಗೆ ಇಂಥದ್ದೇ ಸನ್ನಿವೇಶ ಮಾತ್ರ ಸಿಗಬೇಕು ಅಂತ ಬಯಸಿಲ್ಲ. ಆ ಕುರ್ಚಿಯ ಜೀವನ ಅಂದ್ರೇನೆ ಹಾಗೆ ಎಲ್ಲಾ ಕ್ಷಣಗಳಲ್ಲೂ ತಾನು ಒಂದೇ ರೀತಿ ಇದ್ದುಬಿಟ್ಟಿಲ್ಲ. ಆ ಸನ್ನಿವೇಶನ್ನ ಅನುಭವಿಸಿಕೊಂಡು ಇನ್ನೊಂದು ಸನ್ನಿವೇಶದ ಕಡೆಗೆ ಹೊರಡಲು ತಯಾರಾಗುತ್ತದೆ. ಅದಕ್ಕೆ ಮಾಡುವ ಕೆಲಸದ ಬಗ್ಗೆ ಮಾತ್ರ ಯೋಚನೆ ಇರೋದು. ಹಾಗೆ ನಮ್ಮ ಜೀವನದಲ್ಲೂ ಸನ್ನಿವೇಶಗಳ ಹಾದುಹೋಗುತ್ತವೆ ನಾವು ನಾವಾಗಿರೋದನ್ನ ಕಲಿತುಕೊಳ್ಳಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ