ಸ್ಟೇಟಸ್ ಕತೆಗಳು (ಭಾಗ ೬೨೧) - ಅರ್ಥ

ಸ್ಟೇಟಸ್ ಕತೆಗಳು (ಭಾಗ ೬೨೧) - ಅರ್ಥ

ಅವನಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. "ಜಗತ್ತಿನಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವಲ್ಲ "ಯಾಕೆಂದರೆ ಆತ ಕುವೆಂಪು ಅವರನ್ನ ಓದಿಕೊಂಡೇ ಬೆಳೆದವನು. ಪುಟ್ಟದೊಂದು ಊರು ಅಲ್ಲಿ ಬ್ಯಾಂಕಿಗೆ ಎಂದು ಕೆಲಸಕ್ಕೆ ಸೇರಿದ್ದ. ಆ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೊಸ ರೀತಿಯಲ್ಲಿ ಬ್ಯಾಂಕ್ ಅನ್ನು ಕಟ್ಟುವುದಕ್ಕೆ ತಯಾರಾಗಿದ್ದ. ಪರಿಶ್ರಮ ಹಾಕಿ ಕೆಲಸವನ್ನು ಮುಂದುವರಿಸಿದ. ಒಂದಷ್ಟು ಜನರಿಗೆ ಗೊತ್ತಿದ್ದ ಬ್ಯಾಂಕ್ ಇದೀಗ ಊರಿಗೆ ಪರಿಚಯವಾಯಿತು. ಆತನ ಬಳಗ ದೊಡ್ಡದಾಯಿತು. ಆತನನ್ನ ಪ್ರೀತಿಸುವವರು ಹೆಚ್ಚಾದರು. ಹೀಗೆ ತನ್ನ ಆಲೋಚನೆಗಳಿಂದ ಅವನಲ್ಲಿರುವ ಪರಿಶ್ರಮದಿಂದ ಎಲ್ಲವನ್ನೂ ಸೇರಿಸಿಕೊಂಡು ಮಾದರಿಯಾಗುವಂತೆ ನಿರ್ಮಿಸಿದ ಬ್ಯಾಂಕ್ ಒಂದನ್ನು ಜನರ ಮುಂದಿಟ್ಟ. ದಿನ ಕಳೆಯುತ್ತಾ ಹೋದ ಹಾಗೆ ಆತನಿಗೆ ತಾನು ಮಾಡುತ್ತಿದ್ದ ಕೆಲಸದ ವಿಧಾನ ಬದಲಾಗಬೇಕು, ತಾನೇನಾದರೂ ಹೊಸತನ ಕಲಿಬೇಕು ಹೊಸದರ ಕಡೆಗೆ ಸಾಗಬೇಕು ಅನ್ನುವ ಆಲೋಚನೆ ಆರಂಭವಾಯಿತು. ಇದರ ನಡುವೆ ಆತನಿಗೆ ಪೂರಕವಾದ ಕೆಲಸವು ಸಿಕ್ಕಿತು ಉತ್ತಮವಾದ ಸಂಬಳ ದೊರೆಯಿತು.ಕೆಲಸ ಬಿಡುವುದಕ್ಕೆ ನಿರ್ಧಾರ ಮಾಡಿದ. ಯಾಕೆಂದರೆ ಭವಿಷ್ಯವನ್ನು ಅವನೇ ನಿರ್ಧರಿಸಬೇಕೆ ಹೊರತು ಸುತ್ತಲಿನವರಲ್ಲ. ಹೋಗುವಾಗ ಎಲ್ಲರಿಗೂ  ಕೆಲವರಂದುಕೊಂಡರು ಇಲ್ಲ ಆ ಬ್ಯಾಂಕು ಮತ್ತೆ ಎಂದಿನಂತೆ ನಡೆಯುವುದಕ್ಕೆ ಸಾಧ್ಯವಿಲ್ಲ ? ಅಂತ, ಆದರೆ ಮರುದಿನದ ಬೆಳಗ್ಗಿನಿಂದಲೇ ಬ್ಯಾಂಕು ತನ್ನ ಕೆಲಸವನ್ನು ಮುಂದುವರೆಸಿ ಅಂದು ಹೇಗಿತ್ತು ಹಾಗೆ ಇನ್ನೊಂದಷ್ಟು ಹೊಸ ಮನಸ್ಸಿನ ಹೊಸ ಆಲೋಚನೆಗಳು ಸೇರಿಕೊಂಡು ಊರನ್ನ ಬಿಟ್ಟು ತಾಲೂಕು ಜಿಲ್ಲೆ ರಾಜ್ಯಗಳವರೆಗೂ ತಲುಪಿತು. ಅವನಿಗೆ ಗೊತ್ತಿತ್ತು, ಪ್ರತಿಯೊಂದು  ಕೆಲಸವೂ ಆಗುತ್ತೆ ಆಗುತ್ತಿದ್ದಂತಹ ವಿಧಾನಗಳು ಬದಲಾಗಬಹುದು ಮಾತುಕತೆಗಳು ಬೇರೆಯಾಗಬಹುದೇ ಹೊರತು ಕೆಲಸ ನಡೆಯುತ್ತದೆ. ಉಳಿದವರಿಗೆ ಅರ್ಥವಾಗುವುದಕ್ಕೆ ನಡೆದ ಈ ಘಟನೆ ಬೇಕಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ