ಸ್ಟೇಟಸ್ ಕತೆಗಳು (ಭಾಗ ೬೫೫) - ಕತೆ

ಸ್ಟೇಟಸ್ ಕತೆಗಳು (ಭಾಗ ೬೫೫) - ಕತೆ

ಕಥೆಗಳು ಹಾಗೆ ದಾರಿಯಲ್ಲಿ ಮುಂದೆ ಸಾಗುತ್ತಿವೆ. ಪ್ರತಿ ಒಂದು ಕಥೆಯನ್ನ ನಿಂತು ಕೇಳುತ್ತೇನೆ . ಎಲ್ಲಾ ಕಥೆಗಳನ್ನು ನಾನೇ ಹೇಳಿಬಿಟ್ಟರೆ ಮುಂದೊಂದು ದಿನ ನಿಮಗೂ ಒಂದಷ್ಟು ಕಥೆಗಳು ಮಾತನಾಡಿಸುವುದಕ್ಕೆ ಬಂದಾಗ ಆ ಕಥೆಗಳನ್ನ ಕೇಳಿದ್ದೇನೆ ಅಂದುಕೊಂಡು ನೀವು ಆ ಕಥೆಗಳಿಗೆ ಕಿವಿಯಾಗದೆ ಹೋದ್ರೆ ಕಥೆಗಳಿಗೂ ನೋವಾಗಬಹುದು ಹಾಗಾಗಿ ಎಲ್ಲ ಕಥೆಗಳನ್ನು ನಿಮ್ಮ ಮುಂದೆ ಇಡೋದಿಲ್ಲ. ಆ ಮನೆಯಲ್ಲಿ ಎರಡು ಮುದ್ದಾದ ಹೆಣ್ಣು ಮಕ್ಕಳು, ಊರು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ ಹಾಗಾಗಿ ಯೋಚನೆಗಳು ಕೂಡ ದೊಡ್ಡದಾಗಿರಲಿಲ್ಲ. ಓದು ಸಾಕು ಮದುವೆ ಬೇಕು ಅನ್ನುವಂತ ಕಾಲಘಟ್ಟ. ತಂದೆ ತಾಯಿಗೆ ಮಗಳನ್ನು ಓದಿಸಬೇಕು. ಊರವರ ಒತ್ತಡ. ಮುಂದೆ ಸಮಸ್ಯೆಯಾಗಲಿದೆ, ದಾರಿ ತಪ್ಪುಬಹುದು, ಬದುಕು ಸರಿ ದಾರಿಯಲ್ಲಿ ಸಾಗಲಿಕ್ಕಿಲ್ಲ, ಸುಮ್ಮನೆ ದೊಡ್ಡ ಓದಿಗಿಂತ ದೊಡ್ಡ ಕುಟುಂಬವೊಂದಕ್ಕೆ ದಾಟಿಸಿ ಬಿಡಿ, ನೆಮ್ಮದಿಯ ಬದುಕನ್ನ ಸಾಗಿಸಬಹುದು ಅಂತ. ತಂದೆಗೆ ಮಕ್ಕಳ ಮೇಲೆ ನಂಬಿಕೆ ಎಲ್ಲರ ವಿರೋಧಗಳನ್ನ ಕಟ್ಟಿಕೊಂಡೆ ದೊಡ್ಡ ಊರಿನ ದೊಡ್ಡ ಶಾಲೆಗೆ ಸೇರಿಸೇ ಬಿಟ್ರು. ಶಾಲೆ, ಕಾಲೇಜುಗಳ ಮೆಟ್ಟಿಲನ್ನ ಹತ್ತಿ ಕೆಲಸ ಸಂಪಾದಿಸಿ ಹೇಳಿದವರ ಮನೆಯ ಬದುಕಿಗಿಂತ ಅದ್ಭುತವಾದ ಜೀವನವನ್ನು ಆ ಮನೆಯ ಹೆಣ್ಣು ಮಕ್ಕಳು ಮಾಡ್ತಾನೆ ಬಂದ್ರು. ಹೇಳಿದವರೆಲ್ಲ ಸಾಧನೆಯನ್ನ ಕೊಂಡಾಡಿದರು. ಈ ಕಥೆ ಹಾದುಹೋಯಿತು. ನಾಳೆ ಸಿಗುವ ಕಥೆಯಲ್ಲಿ ಮತ್ತೊಂದು ಸಲ ಮಾತನಾಡಿ ನಿಮ್ಮ ಜೊತೆಗೆ ಮಾತಿಗೆ ನಿಲ್ಲುತ್ತೇನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ