ಸ್ಟೇಟಸ್ ಕತೆಗಳು (ಭಾಗ ೬೬೩) - ಮನಸ್ಸು

ಸ್ಟೇಟಸ್ ಕತೆಗಳು (ಭಾಗ ೬೬೩) - ಮನಸ್ಸು

ಭಗವಂತನಿಗೆ ಬೇಸರವಾಗಿ ಬಿಟ್ಟಿದೆ ಕಾರಣವೇನೆಂದರೆ ಆತ ತಾನು ಸೃಷ್ಟಿಸಿದ ಎಲ್ಲ ಜೀವಿಗಳಲ್ಲೂ ಸುಂದರವಾದ ಮನಸ್ಸನ್ನು ಕೊಟ್ಟು ಭೂಮಿಗೆ ಕಳಿಸಿ ಬಿಟ್ಟಿದ್ದಾನೆ ಆ ಸುಂದರವಾದ ಮನಸ್ಸನ್ನು ಉಪಯೋಗಿಸಿಕೊಂಡು ನಾವು ಏನಾಗಬೇಕು ಅನ್ನೋದು ಆ ಆ ಮನುಷ್ಯರಿಗೆ ಬಿಟ್ಟಿರೋದು ಈ ಕೆಲಸವನ್ನು ಮಾಡಿ ಭಗವಂತ ನೆಮ್ಮದಿಯಾಗಿದ್ದ ಆದರೆ ಇತ್ತೀಚಿಗೆ ಕೆಲಸಗಳಿಂದ ಕಳ್ಳತನ ಸುಳ್ಳು ಮೋಸ ಹೆಚ್ಚಾಗಿದ್ದವೇ ಯಾರು ತಮ್ಮ ಸ್ವಾರ್ಥಕ್ಕೋಸ್ಕರ ಜೀವಗಳನ್ನ ಕ್ಷಣದಲ್ಲಿ ಆ ವಾಹನೆ ಮಾಡಿಕೊಳ್ಳುತ್ತಿದ್ದಾರೆ ಯಾವುದೋ ಕೆಟ್ಟ ಸಮಯದಲ್ಲಿ ಕೆಟ್ಟ ಆಲೋಚನೆಗಳು ಮನಸ್ಸಿನೊಳಗೆ ಮೂಡಿ ಚೂರಿ ಇರಿದು ನೋವುಕೊಟ್ಟು ಪ್ರಾಣಗಳನ್ನ ಕಿತ್ತುಕೊಳ್ಳುತ್ತಿದ್ದಾರೆ ಭಗವಂತ ಅವರ ಮನಸ್ಸಿನಲ್ಲಿ ಎಂದು ಈ ರೀತಿಯ ಆಲೋಚನೆಗಳನ್ನ ಸೃಷ್ಟಿಸಿರಲಿಲ್ಲ ಹಾಗಿದ್ದಾಗ ಈ ಆಲೋಚನೆಗಳು ಸೃಷ್ಟಿಯಾದದ್ದು ಎಲ್ಲಿಂದ ಈ ಆಲೋಚನೆಗಳು ಒಬ್ಬ ವ್ಯಕ್ತಿಯ ಜೀವವನ್ನು ತೆಗೆಯುವ ಹಾಗೆ ಮಾಡಿರೋದು ಹೇಗೆ ಅವನಿಗೆ ಸೂಕ್ತ ಮುತ್ತಲೇ ಸಿಗುತ್ತಿರುವಂತಹ ವಾತಾವರಣ ಸರಿ ಇಲ್ಲವೋ ಯಾರಾದರೂ ಮನಸ್ಸನ್ನು ಬದಲಿಸುವವರು ಜೊತೆಗಿದ್ದಾರೆ ದಿನಗಳಿಂದ ಈ ಕಾರಣ ಹುಡುಕೋದಕ್ಕೆ ಇದ್ದಾನೆ. ತಿಳಿದವರು ದೊಡ್ಡವರು ಮೇಧಾವಿಗಳ ಬಳಿ ಕೇಳಿದಾಗಲೂ ಕೂಡ ಅವರ ಕಡೆಯಿಂದ ಏನು ಉತ್ತರವಿಲ್ಲ ಒಟ್ಟಿನಲ್ಲಿ ಪ್ರಶ್ನೆಗೆ ಭಗವಂತನಿಗೆ ಉತ್ತರ ಸಿಕ್ಕಿಲ್ಲ. ಪ್ರೀತಿಯ ಬದುಕನ್ನ ಕಟ್ಟಿಕೊಳ್ಳೋ ಮನಸ್ಸನ್ನು ಕೊಟ್ಟಿರುವ ನಾನು ದ್ವೇಷದ ಅಸೂಯೆಯ ಹೊಟ್ಟೆಕಿಚ್ಚಿನ ಇತರ ಸಾವನ್ನ ಇಷ್ಟಪಡುವ ಮನಸ್ಸುಗಳನ್ನ ಅವರಾಗಿ ಬದಲಿಸಿಕೊಂಡದ್ದು ಹೇಗೆ ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ