ಸ್ಟೇಟಸ್ ಕತೆಗಳು (ಭಾಗ ೬೮೩) - ಅಂತೆ ಕಂತೆ

ಸ್ಟೇಟಸ್ ಕತೆಗಳು (ಭಾಗ ೬೮೩) - ಅಂತೆ ಕಂತೆ

ಹೀಗೊಂದು ಅಂತೆ ಕಂತೆ, ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಕೂಡ್ಲೆ ಮನುಷ್ಯನಿಗೆ ಮಾತು ಬರಬೇಕು ಅನ್ನೋ ಕಾರಣಕ್ಕೆ ಹಲವಾರು ಪ್ರಯತ್ನಗಳು ನಡಿತಾ ಇದ್ವಂತೆ, ದೇವರ ಬಳಿಯೂ ಉಗ್ರವಾಗಿ ಕೇಳಿಕೊಂಡಿದ್ರಂತೆ. ಆಗ ದೇವರು ಹೇಳಿದ್ದು ಒಂದೇ ಮಾತು. ಹುಟ್ಟಿದ ಕೂಡಲೇ ಮಾತನ್ನ ಕೊಡೋದು ದೊಡ್ಡದಲ್ಲ ಹಾಗೆ ಕೊಟ್ಟರೆ ವ್ಯಕ್ತಿ ಮಾತುಗಳನ್ನ ಮನಸ್ಸಿಗೆ ಇಷ್ಟ ಬಂದ ಹಾಗೆ ಹೇಳ್ತಾ ಹೋಗ್ತಾನೆ. ಎಲ್ಲೂ ಕೂಡ ತನ್ನ ಆಲೋಚನೆಗಳನ್ನ ವಿವೇಚನೆಗಳನ್ನು ವಿವೇಕವನ್ನು ಬಳಸದೆ ಒಂದಷ್ಟು ಜನರಿಗೆ ನೋವನ್ನುಂಟು ಮಾಡುತ್ತಾ ಅನಾಗರಿಕ ವರ್ತನೆ ತೋರಿಸುತ್ತಾನೆ ಹಾಗಾಗಿ ಮಾತು ಬರುವುದಕ್ಕೆ ಒಂದಷ್ಟು ಸಮಯವನ್ನ ಕೊಡೋದು ಯಾಕೆ ಅಂತಂದ್ರೆ ಅಷ್ಟು ಸಮಯದಲ್ಲಿ ಆತ ತನ್ನ ಸುತ್ತಮುತ್ತಲಿನ ವಿಚಾರಗಳನ್ನು ಗಮನಿಸಿಕೊಂಡು ಪ್ರತಿಯೊಂದು ಮಾತುಗಳನ್ನ ಮನಸ್ಸಿನೊಳಗೆ ಮನನ ಮಾಡಿಕೊಂಡು ಮಾತು ಹೀಗಿರಬೇಕು ಹೀಗಾಡಿದರೆ ಅದು ಮಾತಾಗುತ್ತದೆ. ಯಾರ ಜೊತೆ ಹೇಗೆ ವ್ಯವಹರಿಸಬೇಕು ಅನ್ನುವ ಎಲ್ಲ ವಿಚಾರಗಳು ಸಿದ್ಧವಾಗಿ ಬಿಡುತ್ತದೆ ನಂತರ ಮಾತುಗಳನ್ನು ಕಲಿಯುವುದಕ್ಕೆ ಆರಂಭ ಮಾಡುತ್ತಾನೆ. ಅದಕ್ಕೆ ಒಂದಷ್ಟು ವರ್ಷಗಳನ್ನು ಮಾತು ಕಲಿಯುವುದಕ್ಕೆ ದೇವರು ನೀಡಿರುವುದು. ನಾವು ಅದನ್ನು ಹಾಗೆಯೇ ಅನುಸರಿಸಿಕೊಂಡು ಹೋಗಬೇಕು ಮತ್ತು ಮಾತನಾಡುವಾಗ ಹಿಂದೆ ಮುಂದೆ ಭವಿಷ್ಯ ವರ್ತಮಾನ ಭೂತಕಾಲಗಳನ್ನ ಮನದಲ್ಲಿಟ್ಟುಕೊಂಡು ಮಾತನಾಡಬೇಕು. ಭಗವಂತನ ಮಾತು ಅನುಸರಿಸುವುದಕ್ಕೆ ಯೋಗ್ಯವಾದುದು ಹಾಗಾಗಿ ಅದನ್ನೇ ಅನುಸರಿಸಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ