ಸ್ಟೇಟಸ್ ಕತೆಗಳು (ಭಾಗ ೭೨೪) - ಸಂಭ್ರಮ

ಸ್ಟೇಟಸ್ ಕತೆಗಳು (ಭಾಗ ೭೨೪) - ಸಂಭ್ರಮ

ಸಂಭ್ರಮ ಅನ್ನೋದು ನನ್ನ ಬಳಿಗೆ ಯಾವುದೋ ಒಂದು ಕಾರಣಕ್ಕೆ ಹುಡುಕಿಕೊಂಡು ಬರುತ್ತೆ. ಏನಾದರೂ ಗೆಲುವಾದಾಗ ಒಳಿತಾದಾಗ ಸಾಧನೆಯಾದಾಗ ಸಂಭ್ರಮವನ್ನ ಅಪ್ಪಿ ಕೊಂಡಾಡುತ್ತೇನೆ. ಹೀಗೆ ಜೀವನ ಸಾಗ್ತಾಯಿತ್ತು. ಆದರೆ ಆ ದಿನ ಅವರನ್ನು ಭೇಟಿಯಾಗದೇ ಇರ್ತಿದ್ರೆ ಜೀವನದ ಇನ್ನೊಂದು ಮುಖವು ಪರಿಚಯ ಆಗ್ತಾ ಇರಲಿಲ್ಲ. ನನಗೆ ಅವತ್ತು ಅವರು ಹೇಳಿದ ಮಾತು ಹಾಗೆ ಮನಸ್ಸಿನೊಳಗೆ ಗಟ್ಟಿಯಾಗಿ ಉಳಿದುಕೊಂಡು ಬಿಟ್ಟಿತು. ಈ ಸಂಭ್ರಮಿಸುವುದು ಆಚರಣೆಗಳು ವಿಶೇಷ ದಿನಗಳಿಗೆ ಮಾತ್ರ ಸೀಮಿತವಾಗಿರೋದಲ್ಲ. ಪ್ರತಿದಿನವೂ ಸಂಭ್ರಮವಾಗಬೇಕು. ದಿನವೂ ಸಂಭ್ರಮಿಸಲೇಬೇಕು. ಒಂದು ದಿನದ  ಬದುಕನ್ನ ಭಗವಂತ ಉಸಿರಾಡುವುದಕ್ಕೆ ನೀಡಿದ್ದಾನೆ, ತಿಳಿದಿರುವ ಹೊಸ ವಿಚಾರವನ್ನು ಹಂಚಿಕೊಳ್ಳುವುದಕ್ಕೆ ಒಂದು ಸಣ್ಣ ಅವಕಾಶವನ್ನ ದಯಪಾಲಿಸಿದ್ದಾನೆ ಹಾಗಾಗಿ ಈ ದಿನ ಬದುಕಿರುವುದಕ್ಕೆ ಸಂಭ್ರಮ ಪಡಬೇಕು. ಸಂಜೆಯಾಗುವುದರ ಒಳಗೆ ಇಂದು ಬದುಕಿರುವುದಕ್ಕೆ ಅದ್ಭುತವಾದ ಕಾರಣಗಳನ್ನು ಹುಡುಕಿರಬೇಕು .ಬದುಕು, ಬದುಕ ಬೇಕಾದ್ದಕ್ಕೆ ಕಾರಣ, ಬದುಕಿರುವುದಕ್ಕೆ ಕಾರಣ ಇವು ಮೂರು ಸೇರಿದಾಗ ಮಾತ್ರ ಬದುಕು ಹಸನಾಗಿರುತ್ತದೆ. ಸಂಭ್ರಮದಿಂದ ಕೂಡಿರುತ್ತದೆ. ಒಟ್ಟಿನಲ್ಲಿ ದಿನವೂ ಸಂಭ್ರಮವಾಗಿರಲಿ, ಉಸಿರು ನಿಂತಾಗಲೂ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ