ಸ್ಟೇಟಸ್ ಕತೆಗಳು (ಭಾಗ ೭೩೩) - ಬೇಕಾಗಿದ್ದಾರೆ

ಸ್ಟೇಟಸ್ ಕತೆಗಳು (ಭಾಗ ೭೩೩) - ಬೇಕಾಗಿದ್ದಾರೆ

ಹೆಗಲುಗಳು ಒಂದಷ್ಟು ಬೇಕಾಗಿದೆ. ಅದೆಷ್ಟು ಅಂತ ಒಂದೇ ಹೆಗಲಿನ ಮೇಲೆ ಭಾರವನ್ನು ಹೊತ್ತಿ ಸಾಗುತ್ತೀರಿ. ಸಾಗುವ ದಾರಿ ತುಂಬಾ ದೂರ ಇದೆ. ಮತ್ತೆ ಭಾರಗಳು ಹೆಚ್ಚಾದಾಗ ನಡೆಯುವ ವೇಗ ನಿಧಾನವಾಗುತ್ತದೆ. ಆ ಹೆಗಲುಗಳು ಜೊತೆಯಾದಾಗ ದಾರಿ ಸುಲಭವಾಗುತ್ತದೆ. ಆಗ ನಂಬಿದ ಕೆಲಸಗಳು ವೇಗವಾಗುತ್ತದೆ. ಜೊತೆಗೆ ನಿಂತವರಿಗೆ ನಿನ್ನ ನಂಬಿದವರಿಗೆ ಒಂದಿಷ್ಟು ಸಹಾಯವೂ ಆಗುತ್ತದೆ. ಎಲ್ಲವೂ ಮುಗಿದ ನಂತರ ಅದ್ಭುತ ಚಪ್ಪಾಳೆ, ಹೆಗಲು ತಟ್ಟುವಿಕೆ ಎಲ್ಲವೂ ಒಪ್ಪಿಕೊಳ್ಳಬಹುದಾದದ್ದೇ, ಆದರೆ ಕಾರ್ಯಗಳು ಸಾಗುತ್ತಿದ್ದ ಹಾಗೆ ಜೊತೆಗೆ ನಿಂತು ಕೈಹಿಡಿದು ನಡೆಯುತ್ತಿದ್ದರೆ ಇನ್ನೊಂದಷ್ಟು ಅದ್ಭುತವಾದ ದೃಶ್ಯಗಳು ಕಣ್ಣ ಮುಂದೆ ಕಾಣುತ್ತಿತ್ತು. ನಿನಗೆ ಅದು ಈಗ ಅರ್ಥ ಆಗೋದಿಲ್ಲ ಎಲ್ಲವನ್ನು ಮಾಡಿಬಿಡುತ್ತೇನೆ ಅಂತ ಮುನ್ನುಗ್ಗಿ ಬಿಡ್ತೀಯ ಒಂದಾದರೆ ಹೆಗಲುಗಳನ್ನು ಸಂಪಾದಿಸಿ ಜೊತೆಗೆ ಕರೆದುಕೊಂಡು ಹೋಗು ಅಥವಾ ಖಡಾ ಖಂಡಿತವಾಗಿ ಹೆಗಲುಗಳು ಜೊತೇನೆ ನಿಲ್ಲುತ್ತಾರೆ ಅನ್ನುವ ನಂಬಿಕೆ ಇರುವವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೋ. ಒಟ್ಟಿನಲ್ಲಿ ಏಕಾಂಗಿ ಹೆಗಲಿಗೆ ಮೇಲೆ ಹೆಣಗಳೇ ಸ್ಮಶಾನದ ಕಡೆಗೆ ಹೋಗುವುದಿಲ್ಲವಂತೆ, ಇನ್ನೂ ನೀನು ವಹಿಸಿಕೊಂಡ ಜವಾಬ್ದಾರಿಯನ್ನು ಒಂದು ಹೆಗಲಿನಿಂದ ನಿಭಾಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲವೂ ತಿಳಿದಿರುವ ಒಂದಷ್ಟು ಹೊಸ ಆಲೋಚನೆಯ ಪ್ರಾಮಾಣಿಕ ಹೆಗಲುಗಳನ್ನು ಹುಡುಕಿ ಆಯ್ಕೆ ಮಾಡು ಆಗ ನಿನ್ನ ದಾರಿ ಮತ್ತು ನಿನ್ನ ಬದುಕು ಎರಡು ಸುಂದರವಾಗಿರುತ್ತದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ