ಸ್ಟೇಟಸ್ ಕತೆಗಳು (ಭಾಗ ೭೬೦) - ಅವಕಾಶ
ಅವಕಾಶಗಳು ಅಲ್ಲಲ್ಲಿ ಒಂದಷ್ಟು ಖಾಲಿಯಾಗಿ ನಮ್ಮನ್ನ ಕಾಯ್ತಾ ಇರ್ತವೆ. ಅದಕ್ಕೆ ನಾವೇ ಬೇಕು ಅಂತ ಏನು ಇರುವುದಿಲ್ಲ. ಆದರೆ ನಾವು ಆ ಖಾಲಿ ಅವಕಾಶಗಳನ್ನು ತುಂಬಿಸಿದರೆ ನಮಗೂ ಅದರಿಂದ ಒಂದಷ್ಟು ಒಳಿತಾಗ್ತದೆ. ನಾವು ಯಾವ ಬಾಗಿಲು ಯಾವಾಗ ತೆರೆಯುತ್ತದೆ ಅಂತ ಕಾಯ್ತಾನೇ ಕೂತಿರುತ್ತೇವೆ. ಹಾಗೇ ಅಂದುಕೊಂಡು ಕಾಯ್ತಾ ಕೂತರೆ ಕಿಟಕಿಗಳಿಂದ ನೋಡುವ ಭಾಗ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ದಾರಿಯಲ್ಲಿ ಸಾಗುವಾಗ ಹಲವು ಬಾಗಿಲುಗಳು ಕಾಣಿಸಿಕೊಳ್ಳಬಹುದು ಹಾಗೆ ಮುಂದುವರಿಬೇಕು. ಕೆಲವೊಂದು ಸಲ ದಾರಿ ತಪ್ಪು ಬಹುದು ಮತ್ತೆ ಹಿಂತಿರುಗಿ ಬಂದು ಇನ್ನೊಂದು ದಾರಿಯನ್ನು ಹುಡುಕಿಕೊಳ್ಳಬೇಕು. ಒಟ್ಟಿನಲ್ಲಿ ಸಾಗ್ತಾ ಇರಬೇಕು. ಸಧ್ಯದ ಜಗತ್ತಿನಲ್ಲಿ ಸುಮ್ಮನಿದ್ದು ಬಿಟ್ಟರೆ ನಾವು ಮೂಲೆಗೆ ಸರಿದು ಬಿಡುತ್ತೇವೆ. ಅದಕ್ಕೆ ಆಗಾಗ ನಮ್ಮ ಪ್ರತಿಭೆಗಳನ್ನು ಹೊರಗೆ ಹಚ್ಚುತ್ತಾ ನಾವು ಬದುಕಿದ್ದೇವೆ ಏನೋ ಮಾಡ್ತಾ ಇದ್ದೇವೆ ಅಂತ ಜಗತ್ತಿಗೆ ತೋರಿಸಿಕೊಟ್ಟರೆ ಜಗತ್ತು ನಮ್ಮನ್ನ ನೆನಪಿಟ್ಟುಕೊಳ್ಳುತ್ತದೆ. ಇದು ಸದ್ಯದ ತುರ್ತು ಅಂತ ನಾನಂದುಕೊಂಡಿದ್ದೇನೆ. ಅದಕ್ಕಾಗಿ ಇನ್ನೊಂದಿಷ್ಟು ಖಾಲಿ ಅವಕಾಶಗಳ ಹುಡುಕಾಟದಲ್ಲಿ ನಿರತನಾಗಿದ್ದೇನೆ.. ಬದುಕಿನ ಹುಡುಕಾಟ ನಿರಂತರ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ