ಸ್ಟೇಟಸ್ ಕತೆಗಳು (ಭಾಗ ೭೬೭) - ಮಾರುಕಟ್ಟೆ

ಸ್ಟೇಟಸ್ ಕತೆಗಳು (ಭಾಗ ೭೬೭) - ಮಾರುಕಟ್ಟೆ

ಊರಿನ ಕಡೆಗೆ ಹೊರಟಿದ್ದ ರೈಲು ಖಾಲಿಯಾಗಿತ್ತು. ಹಾಗೆ ಒಬ್ಬನೇ ಕೂತಿದ್ದವನಿಗೆ ಪರ್ಸ್ ಮಾರುತ್ತಿದ್ದ ಸತೀಶ್ ಜೊತೆಯಾದ. ಹಾಗೇ  ಮಾತನಾಡುತ್ತಾ ಜೀವನದ ಅದ್ಭುತ ಮಾರುಕಟ್ಟೆಯನ್ನು ಕಣ್ಣ ಮುಂದೆ ತೆರೆದಿಟ್ಟು ಬಿಟ್ಟಿದ್ದ. ನೋಡಿ ಸರ್ ನಮ್ಮಲ್ಲಿರುವ ಪರ್ಸು ಪೂರ್ತಿಯಾಗಿ ಖಾಲಿಯಾಗುವುದಿಲ್ಲ. ಅದರೊಳಗೆ ಹೊಸ ಬಣ್ಣವನ್ನು ತುಂಬಿಸಬೇಕು.ಅದರ ಅಗತ್ಯತೆಯನ್ನು ಜನರಿಗೆ ತಿಳಿಸಬೇಕು. ವಿಭಿನ್ನ ಶೈಲಿಯಲ್ಲಿ ಜನರ ಮುಂದೆ ಇಟ್ಟಾಗ ಅದನ್ನು ಜನ ಖರೀದಿಸುತ್ತಾರೆ. ಇಲ್ಲವಾದರೆ ಅದನ್ನ ಹತ್ತಿರ ಕೊಡಾ ಸೇರಿಸುವುದಿಲ್ಲ. ಹಾಗೆ ನಮ್ಮ ಜೀವನ ಸರ್ .ಸದ್ಯದ ಜಗತ್ತಿನ ಮಾರುಕಟ್ಟೆಯಲ್ಲಿ ಆಗಾಗ ನಾವಿದ್ದೇವೆ ಅನ್ನೋದನ್ನ ತೋರಿಸಿ ಕೊಡುತ್ತಾ ಹೋಗಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧೆಗಳು ತುಂಬಾ ಜೋರಾಗಿರುತ್ತದೆ. ನಾವು ಎಲ್ಲರಿಗಿಂತ ವಿಭಿನ್ನ ಅಂತ ಆಗಾಗ ಪ್ರಚಾರ ಮಾಡ್ತಾ ಹೋಗಬೇಕು ಕೆಲವೊಂದು ಸಲ ನಮ್ಮ ಮೌಲ್ಯ ಅರ್ಥವಾಗುವುದಿಲ್ಲ ಆಗ ನಾವೇ ನಮ್ಮ ಮೌಲ್ಯ ಏನು ಅನ್ನೋದನ್ನ  ತೋರಿಸಿ ಕೊಡುತ್ತಾ ಹೋಗಬೇಕು. ನಾವು ಆಗಾಗ ನಮ್ಮ ಮೂಲ ರೂಪಗಳಿಗೆ ಇನ್ನೊಂದಷ್ಟು ಹೊಸತನವನ್ನು ಸೇರಿಸಿಕೊಂಡು ಮಾರುಕಟ್ಟೆಗೆ ಪ್ರವೇಶಿಸಿ ಸ್ಪರ್ಧಿಗಳ ನಡುವೆ ನುಗ್ಗಬೇಕು . ಆಗಾಗ ನಮ್ಮ ಜಾಹೀರಾತನ್ನು ನಾವೇ ಮಾರುಕಟ್ಟೆಯ ಮುಂದೆ ಪ್ರದರ್ಶಿಸಿ ಜನರಿಗೆ ನಮ್ಮ ಅಗತ್ಯಗಳನ್ನು ತಿಳಿಸಿ ನಮ್ಮನ್ನ ಮರೆಯದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಾರುಕಟ್ಟೆಯಲ್ಲಿ ಕಳೆದುಹೋಗುತ್ತೇವೆ.ನ ಮ್ಮನ್ನು ಖರೀದಿಸುವವರಿಲ್ಲದೆ ಮೂಲೆಗುಂಪಾಗುತ್ತೇವೆ. ಬರ್ತೀನಿ ಸರ್. ಇನ್ನೊಂದಷ್ಟು ಪರ್ಸು ಖಾಲಿಯಾಗಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ