ಸ್ಟೇಟಸ್ ಕತೆಗಳು (ಭಾಗ ೭೭೭) - ಮಾತುಕತೆ

ಸ್ಟೇಟಸ್ ಕತೆಗಳು (ಭಾಗ ೭೭೭) - ಮಾತುಕತೆ

ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು  ಹೀಗೆ ಸಾಗಿತ್ತು.

" ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?"

"ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ್ದೆಯಾಗೋದು ಬಿಟ್ಟು ನಮಗೆ ಬೇರೆ ಏನು ಮಾಡೋದಕ್ಕೆ ಆಗೋದಿಲ್ಲ. ಕ್ಷಣದ ಖುಷಿಗೆ ಓಡಿಹೋಗಿ ಅದರ ಅಡಿಗೆ ಸಿಲುಕಿ ಸಾಯೋದಕ್ಕಿಂತ ನಿಲ್ಲುವುದೇ ಒಳಿತು"

"ಅಮ್ಮ ತುಂಬಾ ಹಸಿವಾಗ್ತಿದೆ ಏನಾದರೂ ತಿನ್ನುವುದಕ್ಕೆ ಸಿಗಬಹುದಾ?"

"ಯಾವತ್ತೂ ಆಹಾರ ಸಿಗೋದಿಲ್ಲ ಮಗ, ನಾವೇ ಹುಡುಕಿ ಕೊಳ್ಳಬೇಕು. ಒಂದಷ್ಟು ಹಸಿವೆಯನ್ನ ಅನುಭವಿಸಬೇಕು. ಉಪವಾಸವನ್ನು ಅಭ್ಯಾಸ ಮಾಡಬೇಕು. ಯಾಕೆಂದರೆ ನಾವು ಯಾರದೋ ಮನೆಯಲ್ಲಿ ಸಾಕಿದ ನಾಯಿಗಳಲ್ಲ. ಬೀದಿಯಲ್ಲಿ ಸುತ್ತುವವರು. ಆ ದಿನ ಸಿಕ್ಕಿದನ್ನೇ ಹೊಟ್ಟೆ ತುಂಬಾ ಉಂಡು ಮುಂದಿನ ಆಹಾರದವರೆಗೂ ಕಾಯಲೆಬೇಕು"

"ಇಲ್ಲ ಮಗು ರಸ್ತೆ ದಾಟುಲೆ ಬೇಕು, ಇದೇ ಜಾಗದಲ್ಲಿ ನಾವು ಕೊನೆವರೆಗೂ ನಿಲ್ಲುವುದಕ್ಕೆ ಆಗುವುದಿಲ್ಲ. ಸ್ಥಳವನ್ನು ಬದಲಿಸಿಕೊಳ್ಳಬೇಕು. ಅಪಾಯ ಬಂದಾಗ ತಪ್ಪಿಸಿಕೊಳ್ಳುವುದಕ್ಕೆ ರಸ್ತೆ ದಾಟಲೇಬೇಕು. ವಾಹನಗಳ ವೇಗವನ್ನ ನೋಡಿಕೊಂಡು ರಸ್ತೆ ದಾಟುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ಯಾರು ಹಿತವರು ಯಾರು ಅಹಿತವಾದವರು ಯಾರು ಶತ್ರುಗಳು ಎನ್ನುವುದನ್ನು ನೋಟದಲ್ಲಿ ಹೆಜ್ಜೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ನಾವು ನಮ್ಮನ್ನ ಒಗ್ಗಿಸಿಕೊಳ್ಳಬೇಕು. ನಮ್ಮವರ ಸಾವನ್ನ ವಿಪರೀತ ದುಃಖ ಪಟ್ಟು ನಾವು ಮರಣಶಯ್ಯೆಗೆ ತಲುಪಬಾರದು. ಸಾಯುವವರು ಸಾಯ್ತಾರೆ, ನಮ್ಮ ಬದುಕಿನ ರೀತಿ ಆಗಾಗ ಬದಲಾಗುತ್ತಿರಬೇಕು. ನಮ್ಮನ್ನು ಪ್ರೀತಿಸುವರು ಖಂಡಿತ ಸಿಕ್ತಾರೆ. ನಮ್ಮ ಜೀವನ ಬದಲಾಗುತ್ತೆ ಹೊಸ ರೀತಿಯಲ್ಲಿ ರೂಪಗೊಳ್ಳುತ್ತದೆ ಆದರೆ ಕಾಯಬೇಕು ಎಚ್ಚರದಿಂದ ರಾತ್ರಿ ಹಗಲು ಎನ್ನದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ