ಸ್ಟೇಟಸ್ ಕತೆಗಳು (ಭಾಗ ೭೮೬) - ಉತ್ತರಿಸು

ಸ್ಟೇಟಸ್ ಕತೆಗಳು (ಭಾಗ ೭೮೬) - ಉತ್ತರಿಸು

ಈ ಭಗವಂತನ ರೀತಿ ರೀವಾಜು ನನಗೆ ಹಿಡಿಸುತ್ತಿಲ್ಲ. ಆತ ನಮ್ಮೆಲ್ಲರನ್ನ ಸೃಷ್ಟಿಸಿದ್ದಾನೆ ನಮಗೆ ಬದುಕು ಸಾವುಗಳನ್ನು ಕೂಡ ನೀಡಿದ್ದಾನೆ ಹಾಗಿರುವಾಗ ಸಾವುಗಳನ್ನು ವಿಧ ವಿಧವಾಗಿ ನೀಡಿರುವುದು ಸತ್ಯ. ಕೆಲವರಿಗೆ ಕಷ್ಟ ಕೊಟ್ಟು ಚಿತ್ರಹಿಂಸೆ ನೀಡಿ ಸಾವನ್ನು ಯಾಕೆ ವಿಜ್ರಂಬಿಸುತ್ತಿದ್ದಾನೆ? ನಮ್ಮೆಲ್ಲರ ಮನಸ್ಸಿನೊಳಗೆ ನಾವು ಮಾಡುವ ಕೆಲಸಗಳಲ್ಲಿ ಭಗವಂತನಿದ್ದಾನೆ ಅಂತಹ ಭಗವಂತ ನಮ್ಮೊಳಗೆ ನಿಂತು ಕೆಟ್ಟ ಕೆಲಸಗಳನ್ನ ಮಾಡುವ ಕೆಲಸಕ್ಕೆ ಯಾಕೆ ಕೈ ಹಾಕಿದ್ದಾನೆ. ವ್ಯಕ್ತಿ ಯಾರೋ ಒಬ್ಬನನ್ನ ಸಾಯಿಸುತ್ತಿದ್ದಾನೆ. ಇನ್ನು ಯಾರಿಗೋ ತೊಂದರೆ ನೀಡುತ್ತಿದ್ದಾನೆ. ಇನ್ನೊಬ್ಬರನ್ನ ಅಸೂಯೆಯಿಂದ ನೋಡುತ್ತಿದ್ದಾನೆ, ಇನ್ನೊಬ್ಬರ ಏಳಿಗೆಯನ್ನ ಸಹಿಸದೆ ಕೆಳಗೆ ಇಳಿಸುವುದಕ್ಕೆ ಕಾಯುತ್ತಿದ್ದಾನೆ ಈ ಎಲ್ಲಾ ಆಲೋಚನೆಗಳನ್ನ ಸೃಷ್ಟಿಸಿದ್ಯಾಕೆ? ಒಬ್ಬನನ್ನ ಹಿಂಸಿಸಿ ಒಳಗೆ ಸಂಭ್ರಮ ಪಡುವ ಯೋಚನೆಯ ತರಂಗಗಳನ್ನ ಹುಟ್ಟಿಸಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಭಗವಂತನೇ ಉತ್ತರ ನೀಡಬೇಕು. ನಾವೆಲ್ಲರೂ ಒಂದು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿರುವವರು ಮತ್ತೆ ನಮ್ಮೊಳಗೆ ಜಾತಿಯ ಬೀಜಗಳನ್ನು ಈ ವಿಚಾರಗಳನ್ನ ಮನಸ್ಸಿನೊಳಗೆ ಹಾಗೆ ಗಟ್ಟಿ ಮಾಡಿಕೊಂಡು ಸಮಸ್ಯೆಗಳನ್ನು ಹೆಚ್ಚು ಮಾಡುವುದಕ್ಕೆ ಹೇಳಿಕೊಟ್ಟವರು ಯಾರು? ನನಗೆ ಪ್ರಶ್ನೆ ಇರೋದು ಭಗವಂತನ ಬಳಿ ಆತ ಉತ್ತರಿಸಲೇಬೇಕು ಸಾವುಗಳ ನಡುವೆ ಒಬ್ಬೊಬ್ಬರ ಬದುಕು ಒಂದೊಂದು ತೆರನಾಗಿ ಪರದಾಡಿ ನರಳಿ ಸಾಯುವಂತಹ ಕ್ಷಣಗಳನ್ನು ಸೃಷ್ಟಿಸಿದ್ದೇಕೆ ಭಗವಂತ... ಹೇಳು ಉತ್ತರಿಸು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ