ಸ್ಟೇಟಸ್ ಕತೆಗಳು (ಭಾಗ ೮೦೯)- ಕಾಲ

ಆ ವರಾಂಡದಲ್ಲಿ ನಿಂತು ಕಾಯುತ್ತಿದ್ದಾರೆ ಹಲವರು. ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಬ್ಬನಿಗೆ ಒಳಗೆ ಹೋಗುವ ಆತುರವಾದರೆ, ಇನ್ನೊಬ್ಬನಿಗೆ ಈ ಸ್ಥಳವನ್ನು ಬಿಟ್ಟು ಹೊರಡುವ ಚಿಂತೆ. ಕೆಲವರಂದುಕೊಂಡಿದ್ದಾರೆ ನಿನ್ನೆಯವರೆಗಿನ ಎಲ್ಲಾ ನೋವುಗಳು ನಾಳೆಯಿಂದ ಇರೋದಿಲ್ಲ ಅನ್ನೋ ಕಾರಣಕ್ಕೆ ಅಲ್ಲಿಗೆ ಆಗಮಿಸಿದ್ದಾರೆ. ಇನ್ನು ಕೆಲವರು ಕಿಸೆಯನ್ನು ತಟ್ಟಿ ನೋಡಿಕೊಳ್ಳುತ್ತಾ ಒಳಗಿನ ಆರೋಗ್ಯವು ಹಾಗೆ ಹೊರಗೆ ಬರಲು ಇನ್ನೆಷ್ಟು ಹಣ ಖಾಲಿ ಆಗಬೇಕು ಅನ್ನುವ ಭಯದಲ್ಲಿದ್ದಾರೆ. ಒಟ್ಟಿನಲ್ಲಿ ಸಾವು ಬದುಕು ಹೊಸದಾರಿ, ಹೊಸ ಆಲೋಚನೆ, ಹೊಸತಿರುವು ಎಲ್ಲವೂ ಹೊಸದಾಗುವ ಗಳಿಗೆಗೆ ಕಾಯುತ್ತಿದ್ದಾರೆ. ಪ್ರಯತ್ನಗಳು ಅಲ್ಲಿ ನಡೆಯುತ್ತಿದ್ದಾವೆ .ಪ್ರತಿಯೊಬ್ಬರೂ ಪ್ರತಿಯೊಬ್ಬರ ಬದುಕಿಗೋಸ್ಕರ ಅಲ್ಲಿ ಶ್ರಮವಹಿಸುತ್ತಿದ್ದಾರೆ. ನಿರ್ಣಯಿಸಬೇಕಾದವರು ಒಳಗಿರುವ ವೈದ್ಯರೋ, ಬರೆದಿಟ್ಟ ಭಗವಂತನೋ, ಜೊತೆಗಿನಿಂದ ಬಂಧುಗಳೋ ಗೊತ್ತಿಲ್ಲ. ಬದುಕು ಖಂಡಿತಾ ಹಿಂದಿನಂತಿರುವುದಿಲ್ಲ ಅನ್ನುವುದಷ್ಟೇ ಆ ಸ್ಥಳದ ಮಹಿಮೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ