ಸ್ಟೇಟಸ್ ಕತೆಗಳು (ಭಾಗ ೮೫೯)- ಪರಿಹಾರ

ಸ್ಟೇಟಸ್ ಕತೆಗಳು (ಭಾಗ ೮೫೯)- ಪರಿಹಾರ

ಅದೆಷ್ಟು ಭಾವಜೀವಿಯಾಗ್ತಾ ಇದ್ದೇನೆ, ಅದು ಸರಿಯೋ ತಪ್ಪೋ ಗೊತ್ತಾಗ್ತಾ ಇಲ್ಲ. ಯಾವುದೇ ಒಂದು ಚಲನಚಿತ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ, ಅಮ್ಮ ಮಗ ಮಾತಾನಾಡೋದು ಕಂಡಾಗ ಹೃದಯ ತುಂಬಿ ಕೊಳ್ಳುತ್ತೆ, ಅಪ್ಪನ ಕಷ್ಟ ನೋಡಿದಾಗ ಹೃದಯವು ಆದ್ರವಾಗುತ್ತೆ, ಪ್ರೇಮಿಗಳಿಬ್ಬರು ಪ್ರೀತಿಯನ್ನು ಹಂಚಿಕೊಳ್ಳೋದು ಗಮನಿಸಿದಾಗ ಹಾಗೆ ಕಣ್ಣಲ್ಲಿ ನೀರು ಇಳಿಯುತ್ತೆ, ಯಾರಿಗಾದರೂ ಒಳ್ಳೆಯದಾಗುತ್ತೆ ಅಂತ ಅಂದಾಗ ನನ್ನಿಂದ ಆಗದೆ ಇದ್ರೂ ಆಗುತ್ತೆ ಅಂತ ಹೇಳುವುದಕ್ಕೆ ಮನಸ್ಸು ತಯಾರಾಗಿ ಬಿಡುತ್ತೆ, ಯಾರದೋ ಕಷ್ಟಕ್ಕೆ ಇನ್ಯಾರದೋ ಒಳಿತಿಗೆ ಸಾಲ ಹೆಚ್ಚಾದ್ರೂ ಪರವಾಗಿಲ್ಲ ಅಂತ ಮನಸ್ಸು ಓಕೆ ಹೇಳುತ್ತೆ, ತುಂಬಾ ಆತ್ಮೀಯರಾದವರು ಒಂದು ಚೂರು ದೂರ ಹೋಗ್ತಿದ್ದಾರೆ ಅಂತ ಅಂದಾಗ ಒಬ್ಬನೇ ಕೂತಾಗ  ಕಣ್ಣು ಕಣ್ಣೀರು ಸುರಿಸುತ್ತೆ, ಆಗಾಗ ಕಾರಣವಿಲ್ಲದೆ ಮನಸ್ಸು ಭಾರ ಆಗುತ್ತೆ,  ನಾನಂದುಕೊಂಡದ್ದನ್ನ ಸಾಧಿಸಲಾಗದೇ ಇದ್ದಾಗ ತುಂಬಾ ಹಾತಾಶನಾಗಿದ್ದೇನೆ. ಜಗತ್ತಿನಲ್ಲಿ ಎಲ್ಲರೂ ಹೀಗೆನಾ?  ಈ ಭಾವಜೀವಿಗಳಾಗುವುದರಿಂದಲೇ ನೋವು ತೊಂದರೆಗಳನ್ನು ಅನುಭವಿಸ್ತಾರಾ?

ಗೊತ್ತಾಗ್ತಾ ಇಲ್ಲ, ಆತ ಮೌನವಾಗಿ ಕುಳಿತು ಯೋಚಿಸುತ್ತಿದ್ದಾನೆ.. ನಾನು ಹೇಗಿರಬೇಕು... ನಿಮ್ಮ ಬಳಿ ಕೇಳಿದ ಪ್ರಶ್ನೆ..  ನೀವಾದರೆ ಏನಂತ ಪರಿಹಾರ ಸೂಚಿಸುತ್ತಿದ್ದೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ