ಸ್ಟೇಟಸ್ ಕತೆಗಳು (ಭಾಗ ೮೮೨)- ಕಾಲಹರಣ
ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು. ಅದರಲ್ಲಿ ನಮ್ಮ ಜೀವನಕ್ಕೆ ಸಿಗುವ ನಮ್ಮ ಜೀವನದ ಸಮಸ್ಯೆಗಳಿಗೆ ಸಿಗುವ ಉತ್ತರಗಳನ್ನು ಕಂಡುಕೊಳ್ಳುವುದಕ್ಕೆ ಅದರಿಂದ ಪರಿಹಾರಗಳನ್ನ ಆಯ್ದುಕೊಳ್ಳುವುದ್ದಕ್ಕೆ ಅವಕಾಶ ಇದೆ. ಆತ ಹಲವು ಸಮಯದಿಂದ ಅದೇ ಪ್ರಯತ್ನ ಮಾಡ್ತಾ ಇದ್ದಾನೆ. ಒಂದು ದಿನವೂ ಅವನಿಗೆ ಬೇಕಾದ ಪರಿಹಾರ ಸಿಗಲೇ ಇಲ್ಲ. ಕೆಲವೊಂದು ಪರಿಹಾರಗಳನ್ನ ಒಗ್ಗಿಸಿಕೊಂಡು ನೋಡಿದರೂ ಕೂಡ ಅದು ಆತನಿಗೆ ಉಪಯೋಗವೂ ಆಗ್ಲಿಲ್ಲ. ಅಲ್ಲಿ ಸೋತವರ ಗೆದ್ದವರ ಕಥೆಗಳಿಂದ ಸಿಗುವ ವಿಷಯಗಳನ್ನ ಸಂಗ್ರಹಿಸುತ್ತಾ ಹೋಗ್ತಾ ಇದ್ದಾನೆ ಆದರೆ ಅದರಿಂದ ಇವನಿಗೇನು ಉಪಯೋಗ ಆಗ್ತಾ ಇಲ್ಲ. ಅವನಿಗೆ ಇನ್ನೂ ಅರ್ಥ ಆಗ್ಲಿಲ್ಲ ಪ್ರತಿಯೊಬ್ಬರ ಸಮಸ್ಯೆ ಅದು ಅವರದ್ದು ಮಾತ್ರ. ಯಾರದೋ ಸಮಸ್ಯೆಯ ಪರಿಹಾರದಿಂದ ಇವನ ಸಮಸ್ಯೆ ಪರಿಹಾರ ಆಗುವುದಿಲ್ಲ ಅನ್ನೋದನ್ನ ಎಷ್ಟು ಸಲ ಹೇಳಿದ್ರು ಆತ ಕೇಳದೆ ಮತ್ತೆ ಬೇರೆಯವರ ಪರಿಹಾರಗಳನ್ನು ಹುಡುಕುತ್ತಾ ಹೊರಟಿದ್ದಾನೆ. ಎಷ್ಟು ಹುಡುಕಿದರೂ ಮತ್ತೆ ಮತ್ತೆ ವ್ಯರ್ಥಕಾಲ ಹರಣ ಮಾಡುತ್ತಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ