ಸ್ಟೇಟಸ್ ಕತೆಗಳು (ಭಾಗ ೮೯೧)- ಅರ್ಥವೇನು?

ಸ್ಟೇಟಸ್ ಕತೆಗಳು (ಭಾಗ ೮೯೧)- ಅರ್ಥವೇನು?

ಬಿಸಿಲು ತುಂಬಾ ಜೋರಾಗಿದೆ. ನೆರಳಿನಲ್ಲಿ ನಡೆಯಲೇಬೇಕು. ಸುತ್ತ ಸಾಲುಮರಗಳು. ಹಾಗೆ ನೆರಳಲ್ಲಿ ನಡೆಯುತ್ತಿರುವನಿಗೆ ತಲೆ ಎತ್ತಿ ನೋಡಿದರೆ ಮರಗಳ ಎಲೆಗಳೆಲ್ಲ ಬರೀ ಕಪ್ಪಾಗಿ ಕಾಣುತ್ತಿವೆ. ಆ ಮರದಲ್ಲಿ ಬಣ್ಣದ ಹೂವುಗಳಿವೆ ಅಂತೆ, ಜೊತೆಗೆ ತುಂಬಾ ಸಿಹಿ ಕೊಡುವ ಹಣ್ಣುಗಳೂ ಇವೆಯಂತೆ. ಆದರೆ ಆ ಬಿಸಿಲಿನ ಪ್ರಖರಕ್ಕೆ, ಹೂವುಗಳ ಪರಿಮಳವನ್ನ ಸ್ವೀಕರಿಸುವುದಕ್ಕಾಗಿಲ್ಲ, ಸೌಂದರ್ಯವನ್ನ ಕಣ್ತುಂಬಿಸಿಕೊಳ್ಳೋಕೆ ಆಗ್ತಾಯಿಲ್ಲ, ಅಂದ್ರೆ ಆ ಹೂವುಗಳು ಚೆನ್ನಾಗಿಲ್ಲ ಅಂತನೂ ಅಲ್ಲ. ಹಣ್ಣುಗಳು ಸಿಹಿಯಾಗಿಲ್ಲ ಅಂತಾನು ಅಲ್ಲ. ಬಿಸಿಲಿನ ಖಾರಕ್ಕೆ ಇದ್ಯಾವುದೋ ಮಾಡುವುದಕ್ಕೆ ಆಗ್ತಾ ಇಲ್ಲ ಅಂತ. ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದ ಹಾಗೆ ಮುಂದುವರೆದುಬಿಟ್ಟೆ. ಮುಂದೆ ದಾರಿಯಲ್ಲಿ ಸಿಕ್ಕಿದ ತುಂಬಾ ಜನ ಕೇಳಿದರೂ ಹೂಗಳು ಹೇಗಿದೆ? ಹಣ್ಣುಗಳು ಹೇಗಿದೆ? ಅಂತ ನನಗೆ ಸರಿಯಾಗಿ ಗಮನಿಸೋದಿಕ್ಕೆ ಆಗದೇ ಇರುವ ಕಾರಣ ಅವರಿಗೆ ಮರದಲ್ಲಿ ಹೂವುಗಳು ಚೆನ್ನಾಗಿಲ್ಲ ಹಣ್ಣುಗಳು ಚೆನ್ನಾಗಿಲ್ಲ ಅಂತ ಅದೇ ಸುದ್ದಿ ಆಯ್ತು. ಮತ್ಯಾರು ಕೂಡ ಆ ಮರದ ಹತ್ತಿರ ಹೋಗಲೇ ಇಲ್ಲ. ಮರಕ್ಕೇನೂ ಬೇಸರ ಇಲ್ಲ ತನ್ನ ಹತ್ತಿರ ಯಾರು ಬರದೇ ಇರೋದಕ್ಕೆ. ಆದರೆ ಒಂದು ಅದ್ಭುತವಾದ ವಿಚಾರ ಜನರ ಬಳಿಗೆ ಸರಿಯಾಗಿ ತಲುಪಲೇ ಇಲ್ಲ. ಅಜ್ಜ ನನಗೆ ಇದನ್ನ ಅಂದಿನಿಂದ ಇಂದಿನವರೆಗೂ ಯಾಕೆ ಹೇಳಿದ್ದರೂ ಅಂತನೂ ಗೊತ್ತಾಗ್ಲೇ ಇಲ್ಲಾ. ನಮ್ಮ ಹಿಂದೆ ನಿಂತಿರುವ ಬೆಳಕು ನಮಗೆ ದಾರಿ ತೋರಿಸಬೇಕು ಅಂತ ಏನೂ ಇಲ್ಲ, ನಮ್ಮನ್ನು ಮರೆಮಾಚಿ ಬಿಡಬಹುದು ಹಾಗಾಗಿ ಸ್ವಲ್ಪ ಎಚ್ಚರ ಇರುವುದು ಒಳ್ಳೆಯದು. ಹೀಗಿರಬಹುದಾ ಅರ್ಥ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ