ಸ್ಟೇಟಸ್ ಕತೆಗಳು (ಭಾಗ ೯೨೫)- ವಾದ
"ನೀವು ನನ್ನ ಜೊತೆ ವಾದ ಮಾಡುವುದಕ್ಕೆ ಬರಬೇಡಿ, ನನ್ನಲ್ಲೊಂದು ಕನ್ನಡಕ ಇದೆ. ಅದರಲ್ಲಿ ನನಗೆ ಎಲ್ಲವೂ ಕಾಣಿಸುತ್ತದೆ ಮತ್ತು ನನ್ನ ಕನ್ನಡಕದ ಒಳಗೆ ನನಗೆ ಏನೆಲ್ಲ ಕಾಣಿಸುತ್ತದೆ ಅಲ್ವಾ ಅದು ಮಾತ್ರ ಸತ್ಯ. ಯಾಕೆಂದರೆ ನನಗೆ ಒಂದಷ್ಟು ಅನುಭವ ಇದೆ. ಯಾವುದು ಸರಿ ಯಾವುದು ತಪ್ಪು ಅನ್ನುವ ನಿರ್ಧಾರವನ್ನ ತೆಗೆದುಕೊಳ್ಳುವ ಸಾಮರ್ಥ್ಯವೂ ನನಗಿದೆ".
"ಇಲ್ಲ ನಿಮ್ಮ ಮಾತನ್ನ ನಾವು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಕೆಲವೊಂದು ಸಲ ನಿಮ್ಮ ಕನ್ನಡಕದ ಒಳಗಿನಿಂದ ಕಾಣದೆ ಇರುವ ಅದ್ಭುತ ವಿಚಾರಗಳು ಕಣ್ಣಮುಂದಿರಬಹುದು, ನಿಮಗೆ ಕಾಣದೆ ಇರುವ ಕಾರಣಕ್ಕೆ ಆತರಹದ ಒಂದು ವಿಚಾರ ಇದೆ ಅನ್ನುವುದನ್ನ ನೀವು ನಂಬದೇ ಇರುವುದು ತಪ್ಪು ಅಂದುಕೊಳ್ಳುತ್ತೇನೆ. ನೀವು ಒಬ್ಬನಿಗೆ ಮರವೇರುವ ಅವಕಾಶವನ್ನೇ ನೀಡದೆ ಆತನಿಂದ ಮರವೇರುವುದಕ್ಕೆ ಸಾಧ್ಯವಿಲ್ಲ ಇನ್ನೊಂದಷ್ಟು ಸಮಯ ಬೇಕು ಅಂತ ಅಂದ್ರೆ ಅದು ತಪ್ಪಾಗುತ್ತೆ ಅಲ್ವಾ? ಅವಕಾಶ ಕೊಟ್ಟು ನೋಡಿ ಸಾಧ್ಯವಾಗದೇ ಇದ್ದರೆ ನಿಮ್ಮ ನಿರ್ಧಾರವನ್ನು ಒಪ್ಪಿಕೊಳ್ಳಬಹುದು. ವ್ಯಕ್ತಿಯ ಆಸೆಗಳನ್ನೆಲ್ಲ ಕಣ್ಣ ಮುಂದೆ ಇಟ್ಟು ಆತನ ಮನಸ್ಸು ಹಿಡಿದಿದ್ದಲ್ಲಿದಿಯೋ ಇಲ್ಲವೋ ಅನ್ನೋದನ್ನ ಪರೀಕ್ಷಿಸಬೇಕೇ ವಿನಃ ಖಾಲಿ ಕೋಣೆಯೊಳಗೆ ವ್ಯಕ್ತಿಯ ಆಸೆಗಳ ಉದ್ದೀಪನಕ್ಕೆ ಪ್ರಯತ್ನಪಟ್ಟರೆ ಅದು ಸಾಧ್ಯವೇ ಇಲ್ಲ".
"ನಾನಿದನ್ನ ಒಪ್ಪಿಕೊಳ್ಳುವುದಿಲ್ಲ"
" ನನ್ನ ಪ್ರಕಾರ ನನ್ನ ಮಾತನ್ನು ನೀವು ಒಪ್ಪಿಕೊಳ್ಳುವುದಿಲ್ಲ, ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಈ ನಿರ್ಧಾರವನ್ನು ಓದುಗರಿಗೂ ಕೇಳುವರಿಗೂ ಕೊಟ್ಟುಬಿಡೋಣ ಅವರಿಗೂ ಅವರದೇ ಆದ ಸ್ವಂತ ನಿರ್ಧಾರ ಇದೆಯಲ್ಲ ಖಂಡಿತವಾಗಿಯೂ ಅವರು ಉತ್ತರ ನೀಡುತ್ತಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ