ಸ್ಟೇಟಸ್ ಕತೆಗಳು (ಭಾಗ ೯೫೫)- ನೀನೇ

ಸ್ಟೇಟಸ್ ಕತೆಗಳು (ಭಾಗ ೯೫೫)- ನೀನೇ

ನಾನು ಇನ್ನೊಂದಷ್ಟೇನೋ ಹೊಸತನ್ನು ಮಾಡಬೇಕು ಅಂದುಕೊಂಡಿದ್ದೇನೆ, ನನ್ನ ಜೊತೆಗೆ ಬರುವವರು ಯಾರು ಇಲ್ಲ, ನನ್ನಲ್ಲಿ ಬೇರೆ ಬೇರೆ ರೀತಿಯ ಕನಸುಗಳಿದ್ದಾವೇ, ಆ ಕನಸನ್ನ ಅರ್ಥ ಮಾಡಿಕೊಂಡು ಅದರಂತೆ ನಡೆ ಸರಿ ತಪ್ಪುಗಳನ್ನು ನಾವು ತಿಳಿಸುತ್ತೇವೆ ಅನ್ನುವವರು ಇಲ್ಲ. ಮೊನ್ನೆ ನನಗೊಂದು ಕೆಲಸ ಮಾಡಬೇಕು ಅಂತ ಹೊರಟಿದ್ದಾಗ ನನ್ನ ಜೊತೆಗಿದ್ದವರೆಲ್ಲರೂ ಅವರವರ ಕೆಲಸದಲ್ಲಿ ಮುಳುಗಿಬಿಟ್ರು, ಅವರೆಲ್ಲರ ಸಹಾಯಕ್ಕೆ ನಾನು ಸಮಯ ಕೊಟ್ಟಿದ್ದೆ ಆದರೆ ನನಗವರ್ಯಾರು ಸಮಯ ಕೊಡುತ್ತಿಲ್ಲ, ಹೊಸ ಬರವಣಿಗೆ ಆರಂಬಿಸಬೇಕು, ದೂರದೂರಿಗೆ ಪಯಣ ಬೆಳೆಸಬೇಕು, ಹೊಸತೊಂದು ಯೋಜನೆ ರೂಪಿಸಬೇಕು, ಏನು ಮಾಡಬೇಕು ಅಂತ ಗೊತ್ತಾಗ್ತಾನೇ ಇಲ್ಲ, ಹಾಗಾಗಿ ಒಬ್ಬಂಟಿಯಾಗಿ ಉಳಿದುಬಿಟ್ಟಿದ್ದೇನೆ.

ಯಾವ ಕೆಲಸವನ್ನು ಮಾಡುವುದು ಬೇಡ ಅನ್ನುವ ಮಟ್ಟಕ್ಕೆ ಬಂದು ಬಿಟ್ಟಿದ್ದೇನೆ .ಅದಕ್ಕೆ ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಹೀಗೆ ಚಿಕ್ಕಮ್ಮನ ಹತ್ತಿರ ಬಂದು ಪ್ರತಿಸಲನೂ ಹೇಳುವ ಹಾಗೆ ಈ ಸಲನೂ ನನ್ನ ದೂರಿನ ಪಟ್ಟಿಗಳನ್ನ ಅವರ ಮುಂದೆ ಇಟ್ಟಿದ್ದೇನ. ಅದಕ್ಕೆ ನನ್ನ ಚಿಕ್ಕಮ್ಮ ಹೇಳಿದ ಮಾತುಗಳು ಇಷ್ಟೇ. "ನಿನಗೆ ನಿದ್ದೆ ಮಾಡಬೇಕು ಅಂತ ಅನಿಸಿದಾಗ ತಲೆದಿಂಬು, ಹೊದಿಕೆ, ಮಂಚ ಚಾಪೆ ಇದ್ಯಾವುದೂ ಕಾರಣವಾಗುವುದಿಲ್ಲ.. ದೇಹಕ್ಕೆ ಒಂದಿಷ್ಟು ಸುಸ್ತು ಆದಾಗ ಮನಸ್ಸಿಗೆ ನೆಮ್ಮದಿಯ ನಿದ್ದೆ ಬೇಕು ಅಂತ ಅನಿಸಿದಾಗ ಖಂಡಿತವಾಗಿಯೂ ಯಾವ ಸ್ಥಳದಲ್ಲಾದರೂ ನಿದ್ದೆ ಬರುತ್ತೆ. ಅದು ಯಾವುದೂ ಇಲ್ಲದೆ ದೇಹ ವಿಶ್ರಾಂತಿಯನ್ನು ಬಯಸುತ್ತೆ. ಹಾಗಿರುವಾಗ ನಿನ್ನ ಸುತ್ತಮುತ್ತ ಇರೋರೆಲ್ಲರೂ ನಿನ್ನ ಅಗತ್ಯಕ್ಕೆ ಬೇಕಾಗಿರುವರಲ್ಲ. ಆ ಕ್ಷಣಕ್ಕೆ ನಿನಗೆ ಅಗತ್ಯ ಅಂತ ಅನಿಸಿರೋದು. ಹಾಗಾಗಿ ನಿನ್ನೊಬ್ಬನಿಂದ ಮಾಡೋದಕ್ಕೆ ಸಾಧ್ಯ ಇದೆ. ಮುಂದುವರೆಸುತ್ತಾ ಹೋಗು. ಖಂಡಿತವಾಗಿಯೂ ನಿನ್ನಿಂದ ಆಗುತ್ತೆ ಅವರಿಂದಾಗಿಯೇ ನಿನ್ನ ಕೆಲಸಗಳು ಮುಂದುವರಿಯುವುದಲ್ಲ,  ಯಾಕೆಂದರೆ ನಿನ್ನ ಜೀವನದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಬೇಕಾದವನು ನೀನು ಮಾತ್ರ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ