ಸ್ಟೇಟಸ್ ಕತೆಗಳು (ಭಾಗ ೯೫೬)- ಶಿವ

ಸ್ಟೇಟಸ್ ಕತೆಗಳು (ಭಾಗ ೯೫೬)- ಶಿವ

ಬೆಳಗೆದ್ದ ಕೂಡಲೇ ತನ್ನ ಪಕ್ಕದಲ್ಲಿ ಮಲಗಿರುವ ಪುಟ್ಟ ಶಿವನ ಪ್ರತಿರೂಪವನ್ನು ನೋಡುತ್ತಾ ಒಂದು ಸಲ ಕಣ್ಮುಚ್ಚಿ ಆ ಭಗವಂತನನ್ನ ಧ್ಯಾನಿಸಿ ತನ್ನ ಕೆಲಸದ ಕಡೆಗೆ ಹೊರಡುವುದು ಅವಳ ವಾಡಿಕೆ. ಆಕೆಯ ದಿನಚರಿಯಲ್ಲಿ ಪುಟ್ಟ ಶಿವ ಅವಳ ಜೀವನದ ಭಾಗವಾಗಿರುವ ಗಳಿಗೆ ಇದೆಯಲ್ಲ ಅದು ಅವರು ಯಾವತ್ತೂ ಮರೆಯದ ಅದ್ಭುತ ಕ್ಷಣಗಳಲ್ಲಿ ಒಂದು. ನೆಮ್ಮದಿಯ ಜೀವನದ ಕನಸು ಕಂಡವಳಿಗೆ ಭಗವಂತ ಎಲ್ಲವನ್ನು ದಯಪಾಲಿಸಿದ್ದ. ಕೈ ಹಿಡಿದ ಗಂಡ ಮತ್ತು ಆಕೆಯ ಕನಸು, ಭಗವಂತನ ಪ್ರತಿರೂಪವೊಂದು ಆಕೆಯ ಹೊಟ್ಟೆಯಲ್ಲಿ ಜನನವಾಗಬೇಕು ಅವನನ್ನು ಎತ್ತಿ ಮುದ್ದಾಡಬೇಕು ಆತ ಜೀವನದ ಕಡೆಯವರೆಗೂ  ಪ್ರೀತಿಸುವ ಜೀವವಾಗಿರಬೇಕು ಅಂತ  ಕನಸು ಕಂಡವರು ಅವರಿಬ್ಬರು. ಹಾಗೆ ಜೀವನ ಸಾಗ್ತಾ ಹೋಯ್ತು .ಆಕೆಯ ಹೊಟ್ಟೆಯೊಳಗೆ ಸಣ್ಣ ಚಲನೆ. ದಿನವೂ ನಿಗದಿಯಾಯಿತು ಹೊಟ್ಟೆ ಒಳಗೆ ಅಡಗಿ ಕುಳಿತ ಪುಟ್ಟ ಶಿವನ ಚಲನವಲನದಲ್ಲಿ ಬದಲಾವಣೆ ಇದೆ ಅಂತ ವೈದ್ಯರು ಹೇಳಿದಾಗ  ಎದೆಯೊಳಗೆ ಭಯ. ಪಕ್ಕದಲ್ಲಿ ಕುಳಿತ ಪ್ರೀತಿಯ ಪತಿರಾಯನ ಕಣ್ಣಲ್ಲಿ ಕಣ್ಣೀರು ಜಿನುಗ್ತಾ ಇದ್ರು ಮುಖದ ನಗುವನ್ನು ಆತ ಮರೆಮಾಚಲಿಲ್ಲ. ದೇವರು ಕೈ ಬಿಡಲಿಲ್ಲ. ಭಗವಂತ ಇವರ ಮನೆಯೊಳಗೆ ಪಾದ ಬೆಳೆಸಬೇಕು ಅಂತ ನಿರ್ಧಾರ ಮಾಡಿ ಆಗಿತ್ತು. ಹಾಗೆಯೇ ಕಣ್ಣು ಮುಚ್ಚಿದವಳಿಗೆ ಪುಟ್ಟ ಕೂಗೊಂದು ಜೀವ ನೀಡಿತು. ಆಕೆಯ ಕಣ್ಣೀರಲಿ ಆನಂದ ಭಾಷ್ಪ.  ಗಂಡನ ಮುಖದಲ್ಲಿ ಮಿನುಗುವ ಬೆಳಕು, ಅಂದಿನಿಂದ ಅವರಿಬ್ಬರ ಬದುಕಿಗೆ ಇನ್ನೊಂದಷ್ಟು ಸ್ಪೂರ್ತಿ ತುಂಬುವ ಶಿವ ಅವರಿಬ್ಬರ ಜೊತೆಯಾಗಿ ಬಿಟ್ಟ. ಆತನಿಗೆ ಈಗ ವರ್ಷ ತುಂಬುತ್ತಾ ಬಂದಿದೆ. ಹಲವಾರು ಅದ್ಭುತ ಕನಸುಗಳನ್ನು ಆತನೆದುರು ಬಿಚ್ಚಿಡುತ್ತಿದ್ದಾರೆ. ಆತ ತೊದಲು  ನುಡಿಯಿಂದ ಎಲ್ಲವಕ್ಕೆ ಒಪ್ಪಿಗೆ ಸೂಚಿಸಿ ತಲೆ ಆಡಿಸ್ತಾ ಇದ್ದಾನೆ. ಭಗವಂತ ದಾರಿ ತೋರಿಸಿದ್ದಾನೆ. ಕೈ ಹಿಡಿದು ನಡೆಸುತ್ತಾನೆ ಕೂಡ.  ಭಗವಂತ ಮಲಗಿದ್ದಲ್ಲಿಂದಲೇ ನಗೆ ಬೀರಿದ ಮನೆ ಬೆಳಕಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ