ಸ್ಟೇಟಸ್ ಕತೆಗಳು (ಭಾಗ ೯೫೭)- ಸರಿ ತಪ್ಪು

ಸ್ಟೇಟಸ್ ಕತೆಗಳು (ಭಾಗ ೯೫೭)- ಸರಿ ತಪ್ಪು

ಇಷ್ಟೊಂದು ತಪ್ಪುಗಳು ನನ್ನಿಂದ ಆಗ್ತಾ ಇದೆ. ಇದನ್ನೆಲ್ಲ ಸರಿ ಮಾಡೋದು ಯಾವಾಗ? ಹೀಗೆ ತಪ್ಪು ಮಾಡ್ತಾ ಹೋಗ್ತಾನೆ ಇದ್ರೆ ನನಗೆ ಮುಂದೆ ತುಂಬಾ ಕಷ್ಟ ಇದೆ ಅಲ್ವಾ? ಹೀಗೆ ಅವನ ಯೋಚನೆಗಳು ಸಾಗ್ತಾ ಇತ್ತು. ಅವನಿನ್ನು ಶಾಲೆ ಮೆಟ್ಟಿಲು ದಾಟಿ ಕಾಲೇಜು ಮೆಟ್ಟಿಲನ್ನ ಹತ್ತಬೇಕು ಅಷ್ಟೇ. ಈಗಲೇ ಪ್ರಶ್ನೆಗಳ ರಾಶಿಗಳನ್ನು ತಲೆಯ ಮೇಲೆ ಹೊತ್ತು ಸುಮ್ಮನೆ ಯೋಚಿಸುತ್ತಿದ್ದಾನೆ. ಅವನನ್ನ ಪ್ರತಿದಿನ ನೋಡ್ತಾ ಇದ್ದ ಅವನ ಶಾಲೆಯ ಮೇಷ್ಟ್ರು, ಅವನನ್ನ ಪಕ್ಕದಲ್ಲಿ ಕುಳ್ಳಿರಿಸಿ ಮಾತನಾಡಲಾರಂಭಿಸಿದ್ರು, ನೋಡು ಶಾಲೆಯಲ್ಲಿ ಮೊದಲು ಗೆರೆ ಪುಸ್ತಕವನ್ನು ನೀಡುತ್ತಾರೆ ಅದರಲ್ಲಿ ಬರೆದು ಅಭ್ಯಾಸವಾದ ಮೇಲೆ ಖಾಲಿ ಪುಸ್ತಕದಲ್ಲಿ ನೇರವಾಗಿ ಬರೆಯೋದಕ್ಕೆ ಸಾಧ್ಯ ಆಗುತ್ತೆ. ಇಲ್ಲದಿದ್ದರೆ ಓರೇ ಕೋರೆಯಾಗಿ ಬರೆದು ಒಂದು ತುದಿಯನ್ನು ತಲುಪುವುದಕ್ಕೆ ಸಾಧ್ಯವಾಗುವುದಿಲ್ಲ. ಮೊದಲು ಗೆರೆಯಲ್ಲಿ ಬರೆದು ಅಭ್ಯಾಸವಾದಾಗ ಖಾಲಿ ಹಾಳೆಯಲ್ಲೂ ಬರವಣಿಗೆ ನೇರವಾಗಿರುತ್ತದೆ.ತಪ್ಪುಗಳಾಗಬೇಕು ಅದರಿಂದ ನೀನು ಬುದ್ಧಿ ಕಲಿಯೋದಕ್ಕೆ ಸಾಧ್ಯ. ಹೆಚ್ಚು ಹೆಚ್ಚು ಹೊಸ ತಪ್ಪುಗಳು ನಿನ್ನನ್ನ ಸರಿದಾರಿಯಲ್ಲಿ ಖಂಡಿತ ಕೊಂಡೊಯ್ಯುತ್ತವೆ. ಗುರುಗಳು ಹೇಳಿದ ಮಾತುಗಳು ಇನ್ನೊಂದಷ್ಟು ಧೈರ್ಯ ತುಂಬಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ