ಸ್ಟೇಟಸ್ ಕತೆಗಳು (ಭಾಗ ೯೭೩)- ಒಳಗಿನವ

ಸ್ಟೇಟಸ್ ಕತೆಗಳು (ಭಾಗ ೯೭೩)- ಒಳಗಿನವ

ಒಮ್ಮೆ ಒಳಗಿನವ ಮಾತು ಕೇಳಿ. ಇವತ್ತು ಸ್ವಲ್ಪ ಮಾತನಾಡಿದ. ಅವನ ಮಾತನ್ನು ನಾನು ಕೇಳಿದಕ್ಕೆ ಅವನಿಗೆ ಖುಷಿ ಸಿಕ್ಕಿತು. ದಾರೀಲಿ ಬರ್ತಾ ಮಳೆ ಇತ್ತು. ಯಾರೋ ಒಬ್ಬರಿಗೆ ನಾನು ಹೋಗಬೇಕಾಗಿದ್ದ ದಾರಿಯಲ್ಲಿ ಅವರಿಗೆ ಹೋಗೋದಕ್ಕೆ ಇರಲಿಲ್ಲ. ಆದರೂ ಅವರನ್ನು ಅವರು ಹೇಳಿದ ದಾರಿಗೆ ಬಿಟ್ಟು ಬಂದೆ. ಅದು ಒಳಗಿದ್ದವನಿಗೆ ಒಂಥರಾ ಖುಷಿ ಸಿಕ್ಕಿತು ಮತ್ತು ಒಳಗಿದ್ದವ ನನಗೆ ಒಂದಷ್ಟು ವಿಚಾರಗಳನ್ನು ತುಂಬಾ ದಿನದ ಹಿಂದೆ ತಿಳಿಸಿದ್ದ ನೀನು ಹೀಗಿರಬೇಕು ಈ ಕೆಲಸ ಮಾಡಬೇಕು ಇದು ನಿನ್ನ ದಿನಚರಿ ಅದರಲ್ಲಿ ಯಾವುದನ್ನು ಕೂಡ ನಾನು ಅನುಸರಿಸಿ ಇರಲಿಲ್ಲ. ಆದರೆ ಇವತ್ತು ಒಂದಷ್ಟು ವಿಚಾರವನ್ನು ಅನುಸರಿಸಿರುವುದರಿಂದ ಅವನಿಗೆ ಯಾಕೋ ನನ್ನ ಮೇಲೆ ನಂಬಿಕೆ ಬಂತು ಅಂತ ಕಾಣುತ್ತೆ. ಹೊಸ ಹೊಸ ವಿಚಾರಗಳನ್ನು ಹಂಚಿಕೊಂಡ. ಯಾವ ದಾರಿಯಲ್ಲಿ ಸಾಗಿದರೆ ಒಳ್ಳೆಯದು ಅನ್ನೋದನ್ನು ತಿಳಿಸಿದ. ಈ ಒಳಗಿನವ ಮಾತಾಡಬೇಕು ಅಂತಿದ್ರೆ ಅವನ ಮಾತನ್ನು ಕೆಲವನ್ನಾದರೂ ನಾವು ಕೇಳಲೇಬೇಕು. ಕೇಳದೆ ಇದ್ದರೆ ಅವನು ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ. ಅವನು ಯಾವತ್ತು ಮಾತು ನಿಲ್ಲಿಸುತ್ತಾನೋ  ಆಗ ನಾವು ಸರಿಯಾದ ಗುರಿಯನ್ನು ತಲುಪೋದಕ್ಕೆ ಸಾಧ್ಯನೇ ಆಗುವುದಿಲ್ಲ. ಹಾಗಾಗಿ ಹೊರಗೆ ಮಾತನಾಡುವ ಬದಲು ಒಳಗೆ ಮಾತನಾಡಿ ನೋಡಿ ನಿಮ್ಮ ಸರಿ ತಪ್ಪುಗಳನ್ನ ಹೊರಗೆ ನಿಂತವರ ಬಳಿ ಕೇಳುವುದಕ್ಕಿಂತ ಸುಮ್ಮನೆ ನಿಮ್ಮೊಳಗಿನ ಅವನ ಬಳಿ ಕೇಳಿದರೆ, ಅವನು ಯಾವತ್ತೂ ಮೋಸ ಮಾಡೋದಿಲ್ಲ, ಮುಖಸ್ತುತಿಯೂ ಮಾಡೋದಿಲ್ಲ. ನನಗೆ ಅವನಿಂದ ಹಲವು ಸಲ ಕಪಾಳಕ್ಕೆ ಬಿದ್ದಿದೆ. ಅವನ ಮಾತು ಪಾಲಿಸುವ ಸೂಚನೆಯನ್ನು ಕೊಟ್ಟಿದ್ದೇನೆ. ಗೊತ್ತಿಲ್ಲ ಮುಂದೆ ಏನಾಗುತ್ತೆ ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ