ಸ್ಪೆಷಲ್ ಪಾಲಕ್ ಪೂರಿ

ಸ್ಪೆಷಲ್ ಪಾಲಕ್ ಪೂರಿ

ಬೇಕಿರುವ ಸಾಮಗ್ರಿ

೨ ಹದ ಗಾತ್ರದ ಪಾಲಕ್ ಕಟ್ಟು, ಗೋಧಿ ಹಿಟ್ಟು ಒಂದೂವರೆ ಕಪ್, ಓಂ ಕಾಳು ಅರ್ಧ ಚಮಚ, ಹಸಿಮೆಣಸಿನ ಕಾಯಿ ೨-೩, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಕಾಲು ಕಪ್ ನೀರಿನ ಜೊತೆ ಬೇಯಿಸಿ. ಪಾಲಕ್ ಬೆಂದು ತಣ್ಣಗಾದ ನಂತರ ಅದರ ಜೊತೆ ಹಸಿಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಓಂ ಕಾಳು, ಉಪ್ಪು, ರುಬ್ಬಿಕೊಂಡ ಪಾಲಕ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸುತ್ತಾ ನಿಧಾನಕ್ಕೆ ನೀರನ್ನು ಸೇರಿಸಿ ಹದವಾಗಿ ಹಿಟ್ಟನ್ನು ಕಲಸಿಕೊಳ್ಳಿ . ಹೀಗೆ ಹಲಸಿದ ಹಿಟ್ಟನ್ನು ಹತ್ತು ನಿಮಿಷ ಹಾಗೆಯೇ ಇಟ್ಟುಬಿಡಿ. ನಂತರ ಆ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಲು ಇಟ್ಟು ಅದು ಕಾದ ನಂತರ ಲಟ್ಟಿಸಿ ಇಟ್ಟಿದ್ದ ಪೂರಿಗಳನ್ನು ನಿಧಾನವಾಗಿ ಎಣ್ಣೆಯಲ್ಲಿ ಕರಿಯಿರಿ. ಕೂರ್ಮಾ ಅಥವಾ ಬಟಾಟೆ ಪಲ್ಯದ ಜೊತೆ ತಿನ್ನಲು ಬಹಳ ರುಚಿಕರ.