ರಾಜಕಾರಣಿ
ರಾಜಕಾರಣಿಯನ್ನು
ವೇದಿಕೆಯಿಂದ ನೂಕಿದ.
ಕವಿ
ಕವಿಯನ್ನು
ಲೇಖನಿಯಿಂದ ಇರಿದ.
ಚಿತ್ರಗಾರ
ಚಿತ್ರಗಾರನ ಮುಖಕ್ಕೆ
ಮಸಿ ಬಳಿದ.
ನಟ
ನಟನನ್ನು ನೋಡಿ
ನಟಿಕೆ ಮುರಿದ.
ಸತ್ತವನಿಗೆ ಮಾತ್ರ
ಶತೃಗಳಿಲ್ಲ.
-----------------------
c v sheshadri holavanahalli. (" ರೆಕ್ಕೆ ಗೂಡು ಆಕಾಶ " ಎಂಬ ನನ್ನ ಸಂಕಲನದಿಂದ)