ಸ್ವಲ್ಪ ನಗು - ಸ್ವಲ್ಪ ಅಳು !
ಮೊನ್ನೆ ಒಬ್ಬ ಸ್ನೇಹಿತ ಬಂದಿದ್ದ ... ಹೊಸದಾಗಿ ಮದುವೆ ಆಗಿದ್ದು, ಹೆಂಡತಿಯನ್ನೂ ಕರೆ ತಂದಿದ್ದ ... ಸೋಜಿಗ ಅಂದ್ರೆ, ಅವನ ಮದುವೆ ಮುನ್ನ, ಅವನಿಗೆ ’ಭಾಭಿ’ ಆಗಿದ್ದ ನನ್ ’ಬೀವಿ’ಯನ್ನು ಅವತ್ತು "ದೀದಿ" ಅಂತ ಕರೀತಿದ್ದ !!! ಪಕ್ಷ ಬದಲಿಸೋ ರಾಜಕಾರಣಿಯ ಹಾಗಿತ್ತು ಅವನ ಪರಿ .. ಆ ಸೋಜಿಗವೇ ಈ ಕವನಕ್ಕೆ ದಾರಿ ಮಾಡಿಕೊಟ್ಟಿತು ಅನ್ನಿ ....
ಬೀವಿ’ಯ ನಂಬಿ ಬದುಕೋ ಜೀವಿ
ಬೀವಿ’ಯ ನಂಬದಿರೆ ಕಂಡ್ಕೋ ಬಾವಿ
ಬೀವಿ ನಿನ್ ನಂಬದಿರೆ ಕಟ್ಕೋ ಕಾವಿ
ನಂಬಿದ್ ಬೀವಿ ನಿನ್ ನಂಬಿದರೆ ಸುಖವೋ ಜೀವಿ
ನಂಬಿದ್ ಬೀವಿ ಕೊಟ್ರೆ ಕೈಯಿ ಹಣೆಗಿಟ್ಕೋ ಕೋವಿ
-----------
ಈಚೆಗೆ ಟೈಮ್ಸ್ ಪತ್ರಿಕೆಯಲ್ಲಿ Malcom and Miriam Klein ಅವರ ಎಂಬತ್ತಾರು ವರ್ಷಗಳ ದೀರ್ಘ ಒಡನಾಟದ ಬಗ್ಗೆ ಓದುತ್ತಿದ್ದೆ. ಇವರುಗಳ ಮೊದಲ ಭೇಟಿ ಆಗಿದ್ದು ನರ್ಸರಿ ಶಾಲೆಯಲ್ಲಿ! ಖೇದಕರ ಕಥೆ ಓದುತ್ತಿದ್ದಂತೆ ಕವನವೊಂದು ಮನದಲ್ಲಿ ಮೂಡಿತು. ಸಂದರ್ಭವೊಂದು ಬಿಟ್ಟರೆ ಓದಿದ ವಿಷಯಕ್ಕೂ ಕವನಕ್ಕೂ ಯಾವ ಸಂಬಂಧವೂ ಇಲ್ಲ !
ಅಂದು
ಇಂದು
ನಾ ಹಿಂದು
ನೀ ಮುಂದು
ಶಾಲೆಯಲ್ಲೂ ಕಾಲೇಜಿನಲ್ಲೂ
ನೀ ಮುಂದು
ನಾ ಹಿಂದು
ನಿನ್ನ ಮತವೇನೋ ಅರಿಯೆನು ಎಂದೂ
ನನ್ನ ಮತವಂತೂ ಪ್ರೀತಿಗೇ ಎಂದೂ
ನಾ ಹಿಂದು
ನಿನ್ನ ಕುಡಿನೋಟಕ್ಕೆ ಕಾದು ಅಂದು
ಕಾಯುತ್ತಲೇ ಬೆಂದು
ಆಗಿದ್ದೆ ಕಂದು !
ನಿನ್ ನೆನಪಲ್ಲಿ ಮಿಂದು
ನಾ ನೆಂದು, ನೊಂದು
ಆಗಿಹೆನು ಹುಚ್ಚನ ಬಂಧು !
ನೀ ಮಾತ್ರ ಎಂದೂ
ನೋಡಲಿಲ್ಲ ತಿರುಗಿ ಹಿಂದು
ಏಕೆಂದರೆ, ನೀ ಸದಾ ಮುಂದು !
ನನ್ ಬಣ್ಣ ಮಾತ್ರ ಕಂದು
ಬಿಟ್ರೆ, ಇನ್ನೇನಿತ್ತೋ ಕುಂದು
ನಾನರಿಯೆ, ಎಂದೆಂದು
ನಾಳೆಗಳು ಇಂದಿಗೆ ಬಂದು
ನೆನ್ನೆಗಳಾಗಿ ಹೋದವು ಬೆಂದು
ನಾನಿನ್ನೂ ಕಾದಿರುವೆನು ಇಂದು
ನನ್ನಾಸೆಗಳನ್ನೆಲ್ಲ ಕೊಂದು
ಬರಲಾರದ ಲೋಕಕ್ಕೆ
ಹೋದೆಯಾದರೂ ಏತಕ್ಕೆ?
ಅಪ್ಪಿದ್ದೇಕೆ ಸಾವಿನ ತೆಕ್ಕೆ?
ನೀನಿಲ್ಲದ ಲೋಕ ನನಗಿನ್ಯಾತಕ್ಕೆ?
ನನಗಿನ್ಯಾತಕ್ಕೆ?
ನನ್ನಾಸೆಗಳನ್ನು ನಾನೇ ಕೊಂದು
ನಾನಿನ್ನೂ ಕಾದಿರುವೆನು ಇಂದು
ನೆನ್ನೆಗಳು ಕನಸಲ್ಲಿ ಹಾಡಿವೆ ಇಂದು
ನಾಳೆಗಳು ಕನಸಾಗಿ ಕಾಡಿವೆ ಬಂದು
ಅಂದೂ
ಇಂದೂ
ನೀ ಮುಂದು
ನಾ ಹಿಂದು !
Comments
ಉ: ಸ್ವಲ್ಪ ನಗು - ಸ್ವಲ್ಪ ಅಳು !
In reply to ಉ: ಸ್ವಲ್ಪ ನಗು - ಸ್ವಲ್ಪ ಅಳು ! by Chikku123
ಉ: ಸ್ವಲ್ಪ ನಗು - ಸ್ವಲ್ಪ ಅಳು !
ಉ: ಸ್ವಲ್ಪ ನಗು - ಸ್ವಲ್ಪ ಅಳು !
In reply to ಉ: ಸ್ವಲ್ಪ ನಗು - ಸ್ವಲ್ಪ ಅಳು ! by makara
ಉ: ಸ್ವಲ್ಪ ನಗು - ಸ್ವಲ್ಪ ಅಳು !