ಸ್ವಾತಂತ್ರ್ಯದ ಹಕ್ಕಿ

ಸ್ವಾತಂತ್ರ್ಯದ ಹಕ್ಕಿ

ಕವನ

ಸ್ವಾತಂತ್ರ್ಯದ ಹಕ್ಕಿ ಎಲ್ಲಿ ಅಡಗಿಹೆ?

ಮರೆತ ಕವನಕೆ ದನಿಯೊಂದು ಬೇಕಿದೆ

ಬಲಿತ ರೆಕ್ಕೆಗೆ ಬಲವೊಂದು ಬೇಕಿದೆ

ಹಕ್ಕಿ-ಪಿಕ್ಕಿಗಳ ಪದವಾಗಬೇಕಿದೆ

ನಿನ್ನಂತೆ ಹಾರುವುದ ನಾ ಕಲಿಯಬೇಕಿದೆ!

 

ಅಡಗಿರುವ ಮಾತುಗಳ ಕೆದಕಿ ಹೆಕ್ಕಬೇಕಿದೆ

ತುತ್ತ ನೀಡಿ ಪದಗಳ ಕಟ್ಟಬೇಕಿದೆ

ಮೌನವ ಮೀರಿ ನಾ ಬೆಳೆಯಬೇಕಿದೆ

ನಿನ್ನಂತೆ ಮನದಮಾತ ನಾ ಕೂಗಿ ಸಾರಬೇಕಿದೆ.

 

ಕೊಳಕು ತಮದ ಜಲವ ಕಡೆದು ಮೊಸರಾಗಿಸಬೇಕಿದೆ

ಆಳುವವರ ಹಂಗ ತೊರೆದು ಬಿದ್ದವರ ಎತ್ತಬೇಕಿದೆ

ನೊಗಕೆ ಬಲವಾಗಿ ಊಳಬೇಕಿದೆ

ಹೊಸ ಫಲವ ಬೆಳೆಯಬೇಕಿದೆ.

 

ಗುಡಿ-ಮಸೀದಿಗಳಲಿ ಗೂಡನೊಂದ ಕಟ್ಟಬೇಕಿದೆ

ಏಕವಾಗಿ ತುಳಿವವರ ಕೆಡವಬೇಕಿದೆ

ಬಲವಾಗಿ ಮುನ್ನುಗ್ಗುಬೇಕಿದೆ ಮುಗಿಲೆತ್ತರದಿ ಸಾಗಬೇಕಿದೆ

ತೀರದ ಗುರಿಯ ಸೇರಬೇಕಿದೆ.

ಬಾಂದಣದಿ ಚಿತ್ತಾರ ಬರೆಯಬೇಕಿದೆ

ಹೊಸದಿಗಂತವ ಸೃಜಿಸಬೇಕಿದೆ

ಕನಸುಗಳ ನನಸಾಗಿಸಬೇಕಿದೆ.

 

-ನಿರಂಜನ ಕೇಶವ ನಾಯಕ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್