ಸ್ವಾರ್ಥ
ಬರಹ
ಸ್ವಾರ್ಥ
ಸ್ವಾರ್ಥದ ಭೂತ ದ್ವೇಷದ ಖಡ್ಗ ಸೆಳೆದಿತ್ತು|
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||
ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ ಬೇಡಿದರೂ ಬಿಡಲಿಲ್ಲ||
ನಗು ಬಂದೀತೆಂದು ಹಲ್ಲು ಮುರಿದಿತ್ತು
ಓಡಿ ಹೋದಾರೆಂದು ಕಾಲು ತುಂಡರಿಸಿತ್ತು
ಬೇಡವೆಂದವರ ಕೈಯನೇ ಕಡಿದಿತ್ತು||
ಕಣ್ಣೀರು ಒರೆಸುವರ ಕಣ್ಣನೇ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರೆ
ಗಂಟಲನೆ ಸೀಳಿ ಗಹಗಹಿಸಿ ನಕ್ಕಿತ್ತು||
ನೊಂದು ಬೆಂದ ಅತ್ರುಪ್ತ ಆತ್ಮಗಳು
ತಿರುಗಿ ಬಿದ್ದಾಗ ಕಾಲವೇ ಮಿಂಚಿತ್ತು||
*************
-ಕವಿನಾಗರಾಜ್.