Skip to main content
ಕವನ
ಗೆಳೆಯಾ,
ಹಚ್ಚಿದೆ ಒಲವಿನ ಹಣತೆ
ಬೆಳಗಿತು ಎದೆಯಲಿ ಮಮತೆ
ಸಮರವ ಸಾರಿದ
ತಿಮಿರವನು ಕಳೆಯಲು
ತೈಲವನೆರೆವುದ ಮರೆತೆ
****
ಗೆಳೆಯಾ,
ಚೆಲುವೀ ಹೆಣ್ಣಲಿ
ಎದೆಯೊಳ ಮಣ್ಣಲಿ
ಒಲವಿನ ಗಿಡವನ್ನು ನೆಟ್ಟೆ
ಬೇರದು ಇಳಿದು
ಚಿಗುರನು ಒಡೆದು
ಹೂವನು ಬಿಡುವ ಮೊದಲೇ
ನೀ
ನೀರನು ಎರೆವುದ ಬಿಟ್ಟೆ
-ಮಾಲು