ಹಚ್ ಅವರ ಹುಚ್ಚು ಬಿಡಿಸುವ
ಬರಹ
ಗೆಳೆಯರೆ,
ಮೊದಲು ಈ ಲೇಖನವನ್ನು ಓದಿ - [:http://thatskannada…]
ನಾನು ಹಚ್ ಕಂಪೆನಿ ಮತ್ತು ತಲವಾರ್ ಅವರ ಧೋರಣೆಯನ್ನು ಖಡಾಖಂಡಿತವಾಗಿ ಖಂಡಿಸುತ್ತೇನೆ. ನನಗೂ ಬೆಂಗಳೂರಿನ ಹಲವು ಅಂಗಡಿಗಳಲ್ಲಿ ಈ ರೀತಿಯ ಅನುಭವಗಳಾಗಿವೆ. ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಯಾವ ಅಂಗಡಿಯಲ್ಲೂ ನಾನು ವ್ಯಾಪಾರ ಮಾಡದಿರುವ ತೀರ್ಮಾನ ಮಾಡಿರುತ್ತೇನೆ. ಎಲ್ಲರೂ ಇದೇ ಧೋರಣೆಯನ್ನು ಅನುಸರಿಸಿದರೆ ಈ ಕನ್ನಡ ವಿರೋಧಿ ನೀತಿಯನ್ನು ಬಗ್ಗು ಬಡಿಯಬಹುದು. ಎಲ್ಲರೂ ಒಂದುಗೂಡಿ “ಕನ್ನಡಿಗರು ನಿರುಪದ್ರವಿಗಳು, ನಿರಭಿಮಾನಿಗಳು ಮತ್ತು ನಿರ್ವೀಯರು” ಎಂಬ ಹೇಳಿಕೆಯನ್ನು ಸುಳ್ಳು ಮಾಡೋಣ.
ಈಗಿಂದೀಗ ಮಾಡಬೇಕಾಗಿರುವುದೇನೆಂದರೆ ಎಲ್ಲ ಹಚ್ ಗ್ರಾಹಕರು (ನಾನು ಹಚ್ ಗ್ರಾಹಕ ಅಲ್ಲ) ಹಚ್ ಕಂಪೆನಿಗೆ ಇ-ಮೈಲ್ ಮಾಡಿ ಮತ್ತು ಫೋನಾಯಿಸಿ ತಮ್ಮ ಅಸಮಾಧಾನವನ್ನು ದಾಖಲಿಸಿ ತಲವಾರ್ ಅವರು ಕನ್ನಡಿಗರ ಕ್ಷಮೆ ಕೋರಬೇಕು ಎಂದು ಒತ್ತಾಯ ತರಬೇಕು. ಇದಕ್ಕೆ ಅವರು ಒಪ್ಪದಿದ್ದಲ್ಲಿ ಹಚ್ ಸಂಪರ್ಕ ಹೊಂದಿರುವ ಎಲ್ಲ ಕನ್ನಡಿಗರು ತಮ್ಮ ಹಚ್ ಸೇವೆಯನ್ನು ನಿಲ್ಲಿಸಬೇಕು. ಅವರು ಆಗ ದಾರಿಗೆ ಬರುತ್ತಾರೆ.
ಸಿಗೋಣ,
ಪವನಜ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಬದಲಾವಣೆ:ಸ್ಟಿಕಿ...