ಹಣತೆ

ಹಣತೆ

ಕವನ

ಹಣತೆ ಕತ್ತಲ ಕರಗಿಸಿ

ಸುತ್ತಲೂ ಬೆಳಕ ಪಸರಿಸಿ

ಉರಿವುದು ಬಾಳ ಹರಸಿ

ಧನ್ಯತೆಯಲಿ ದೇವನ ಸ್ಮರಿಸಿ.

 

ದೈವತ್ವಕೆ ಬೆಸೆವ ಕೊಂಡಿ

ಬದುಕ ನೋವ ಹಿಂಡಿ

ಜ್ಯೋತಿ ಭರವಸೆಯ ಬಂಡಿ

ಒಳನೋಟಕೆ ಇದುವೇ ಕಿಂಡಿ.

 

ತಾವರೆ ನಗುವಂತೆ ದೀಪ

ಹಚ್ಚಲು ಮನದಲಿ ಪ್ರದೀಪ

ಕರಗುವುದು ಕಾಲದಿ ಲೋಪ

ಗುಡಿಯಾಗಲಿ ಒಳಗಿನ ಸ್ವರೂಪ.

 

ಅನಂತವಾಗಿ ತಾನು ಹರಡುತ 

ಕಲ್ಮಶಗಳಿಗೆ ಜರಡಿ ಹಿಡಿಯುತ

ಕಿರಣ ಚಾಚಲು ನುಗ್ಗುತ 

ತಮವು ಸೊರಗುವುದು ಕುಗ್ಗುತ.

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್