ಹಣ್ಣೆಲೆ ಉದುರುವಾಗ...

ಹಣ್ಣೆಲೆ ಉದುರುವಾಗ...

ಕವನ

ಎಲ್ಲ ಎಲ್ಲ ಹಣ್ಣೆಲೆಗಳು

ಒಂದಲ್ಲ ಒಂದು ದಿನ ಉದುರುವವೆ

ಈ ನಿಜವ ತಿಳಿ ಮನುಜ

 

ಮಡದಿ ಮಕ್ಕಳು ಎನ್ನುವವರು

ನಿನ್ನ ಜೊತೆಗೆ ಉಳಿಯುವರು

ನಿನ್ನ ಕೈಲಿ ಕಾಸು ಇರೊವರೆಗು

ನಿನ್ನ ಮೈಲಿ ಶಕ್ತಿ ಇರೊವರೆಗು 

 

ನಾನು ನನ್ನದು ಎನ್ನುವುದು

ನಿನ್ನ ಬೆನ್ನು ಬಾಗುವವರೆಗು

ನನ್ನವ ತನ್ನವರು ಎನ್ನುವರು

ನಿನ್ನ ಒಲೆ ಉರಿಯುವವರೆಗು

 

ನಂಬಬೇಡ  ನಂಬಬೇಡ

ಜೀವ ಹೋದರು ಎಂದಿಗೂ

ನೀನು ಮಡದಿಮಕ್ಕಳ ವಯಸ್ಸಾದ

ಮೇಲೆ ಎಂದಿಗೂ ನಂಬಬೇಡ

 

ಎಚ್ಚರ ಎಚ್ಚರ ಸಂದ್ಯಾಕಾಲಕೆ

ನೀನು ಎಚ್ಚರ ದುಡಿವಾಗ ಸ್ವಲ್ಪ

ನಿನ್ನದು ನಿನ್ನ ಪಾಲಿಗೆ ಉಳಿದಿರಲಿ

ಅಂತ್ಯದಲಿ ನಿನಗದು ರಕ್ಷಾಕವಚ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್