ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಕಳ್ಳಬೆಕ್ಕಿನ ನಡೆಯು ತಿಳಿದು ಬಂತೇ ನಿನಗೆ

ಕಳ್ಳತನದಲಿ ಬರಹ ಕದಿವಂತೆ ನೋಡು|

ಸುಳ್ಳು ಹೇಳಲು ಕಲಿತು ಕೃತಿಬೆರಕೆ ಮಾಡಿದರೆ

ಹಳ್ಳ ಸೇರುವಿ ನೋಡು -- ಛಲವಾದಿಯೆ||

***

ಯಾರ

ನ್ನೂ

ಹಗುರ

ವಸ್ತುಗಳಂತೆ

ಭಾವಿಸದಿರಿ!

ಒಂದು

ಗ್ರಾಂ

ವಜ್ರ

ವೂ

ಅತ್ಯಂತ

ಶ್ರೇಷ್ಠ !

ತಿಳಿ

ಯಿ

ರಿ ?!

***

ಹೇಳುತಿಹರು ಹಲವರು

ಪಂಡಿತ ಮಹಾಶಯರು

ಆಗಿರಬಹುದು ನಾನು

ವಾಲ್ಮೀಕಿಯಾದಂತೆ !

***

ಹಲ ಕೆಲವರ ಮನ ಮನೆಗಳು

ಒಳಗೊಳಗೆ ದೊಡ್ಡ ತೂತುಗಳು

ಅದಕ್ಕಿಂತ ಸಾವಿರಾರು ಪಾಲು ಉತ್ತಮ

ನಾನಾಗಿರಬಹುದು - ಛಲವಾದಿಯೆ !!

***

ಹೆಸರಿಗಾಗಿ ಬರೆಯದೆ ಜನರಿಗಾಗಿ ಬರೆಯುತಿರು

ಶೋಕಿಗಾಗಿ ತಿರುಗದಿರು ಕೆಲಸಕಾಗಿ ತಿರುಗುತಿರು

ಚೆಲುವಿಗಾಗಿ ಧರಿಸದಿರು ಮಾನಕಾಗಿ ಧರಿಸುತಿರು

ಒಳ್ಳೆಯದ ಬಯಸುತಿರು -- ಛಲವಾದಿಯೆ !

***

ಚೆಲುವು ಹೊತ್ತಿದ್ದರೂ ಬುವಿಯು ಬರಡಾಗಿದೆ

ಮನುಷ್ಯನ ಆಸೆಗೆ ಸಂಪೂರ್ಣ ನಾಶವಾಗಿದೆ

ಮಾಳಿಗೆಯಿಂದ ಜಗತ್ತನ್ನು ಅಳೆಯುವವನು

ತಲೆಯ ತಗ್ಗಿಸಿ ನೆಲದಿ ನಡೆವಂತಾಗಿದೆ

***

ಬರಹಗಾರರು

ಮಹಾ

ಬುದ್ದಿವಂತರೆಂದು

ವಿವೇಕ

ಕಳೆದುಕೊಳ್ಳ

ಬಾರದು

ನಮ್ಮ

ಬರಹಗಳನ್ನು

ನೋಡಿ

ಓದುಗರು

ಜ್ಞಾನವನ್ನು

ಗಳಿಸುತ್ತಿದ್ದಾರೆ

ಎಂಬುದನ್ನು

ಮರೆಯಬಾರದು !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್