ಹನಿಗಳು ಸರ್ ಹನಿಗಳು !
ಕವನ
ಹುಸಿ
ನಗುವಿನ
ಹಿಂದೆ
ಹಸಿ ಸುಳ್ಳೇ
ಇರುತ್ತದೆ ¡
***
ಎಲ್ಲಿ ಕುರುಡು
ಕಾಂಚಾಣ ಕುಣಿಯುತ್ತಿರುತ್ತದೋ
ಅಲ್ಲೆಲ್ಲ ನಮ್ಮಿಂದಲೇ
ಈ ದೇಶ ಈ ನಾಡು ಉಳಿದಿರುವುದು
ಎಂಬುವವರ ಕಾಲುಗಳೂ
ನೃತ್ಯ ಮಾಡುತ್ತಿರುತ್ತವೆ !
*
ತನ್ನ ಹೊಳಪಿನಿಂದ ವಜ್ರ ಗಮನ ಸೆಳೆಯಿತು
ಗಮನಿಸದವಗೆ ಗಾಜು ಘಾಯಗೊಳಿಸಿತು
***
ನೀನೆಸೆದ ಇಟ್ಟಿಗೆಯಲಿ ಕಟ್ಟಿರುವೆ ನಾ ಮಹಲನ್ನು,
ನಿನ್ನ ಆತಿಥ್ಯಕ್ಕಾಗಿ ಸದಾ ತೆರೆದಿರುವೆ ಬಾಗಿಲನ್ನು
***
ನನ್ನ ಬರಹಗಳೇ
ಶ್ರೇಷ್ಠ
ಅನ್ನುವವರ ಹತ್ತಿರ
ಉಳಿದ ಬರಹಗಾರರು
ಮತ್ತು
ಓದುಗರು ಯಾವತ್ತೂ
ಜಾಗ್ರತೆಯಿಂದ
ಇರಬೇಕು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್