ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಒದೆ ಕೊಡುವವರ

ಕಾಲವದು ಹೋಗಿದೆ

ಸ್ವಾತಂತ್ರ್ಯ ಸಿಕ್ಕಾಗಲೇ

ಮರೆಯಲ್ಲಿ ನಿಂತಿದೆ!

*

ತಲೆನೋವು ಬಂದಾಗ

ಝಂಡು ಬಾಂಬನು ಹಚ್ಚು

ಪ್ರೀತಿಯು ಸಿಗದಾಗ

ಮಂಡೆಯೊಳಗೇ ಹುಚ್ಚು !

*

ಮೌನವದು

ಮುರಿದರೆ

ಶಾಪಗಳೇ

ಮಾತುಗಳು !

*

ಉರಿದು

ಹೋದವರು

ಮನೆ

ಮನವನು

ಮುರಿದೇ

ಹೋದರು !

*

ಹಗಲಲ್ಲೂ

ಕೆಲವರು

ಎಡವುತ್ತಾರೆ

ಪಕ್ಕದವರು

ಕಾಲು

ಕೊಡುವುದರಿಂದ !

*

ಬದಕಿಗೆ ಎಷ್ಟೇ ನೋವಾದರೂ ಬಾಳು ಸಾಗಬೇಕಿದೆ

ಮನಸ್ಸಿಗೆ ಬೇನೆಯಾಗುತ ಎಷ್ಟೇ ಅತ್ತರೂ ನಗಬೇಕಿದೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್