ಹನಿಗಳ ಲೋಕದಲ್ಲಿ...
ಕವನ
ಪ್ರಾಯ
ರಾಜಕಾರಣಿಗಳ ಪ್ರಾಯ
ನಿಗದಿ ಮಾಡಿರಿ ಜನರೆ
ಅರುವತ್ತಾದರೆ ಸಾಕು ಮನೆಗೆ ಕಳುಹಿಸಿ
ಇಲ್ಲವಾದರೆ ನೋಡಿ
ಅರಳು ಮರುಳಿನ ಸಮಯ
ನಿಮ್ಮ ನೆನಪೂ ಇರದೆ ಅವರ ಜಲಸಿ
***
ಶುದ್ಧರು
ನಾವೆಲ್ಲರು ಶುದ್ಧರು
ಎಂದವರ ಒಳ ಹೊರಗು
ಗಬ್ಬೆದ್ದು ನಾರುತಿದೆ ಇಂದು ನೋಡು
ಇವರ ಆಡಳಿತಕ್ಕೆ
ಪ್ರಜಾಪ್ರಭುತ್ವವೇ ಬೇಕೆ
ಅಧ್ಯಕ್ಷೀಯ ಅಧಿಕಾರ ಬರಲಿ ಸಾಕು
***
ನಮಿಸುತ್ತಿದ್ದರು
ರಾಜಕಾರಣಿಗಳೇ
ನೀವೆಂದರೆ ಹಿಂದೆ
ಕಾಲಿಗಡ್ಡ ಬಿದ್ದು ನಮಿಸುತ್ತಿದ್ದರು ಜನರು
ಆದರೆ ಈಗೀಗ
ನಿಮ್ಮ ನೋಡಿದರೆ ಸಾಕು
ಕೊಳೆತ ಮೊಟ್ಟೆಯ ಹಿಡಿದು ಎಚ್ಚರದಲ್ಲಿಹರು
***
ಮುಕ್ತಕ
ಜನರಿಂದ ಬೆಂಬಲವ ಗಳಿಸುತಲೆ ಪದವಿಯನು
ನನಗಿಂದು ಕೊಡಿರೆಂದು ಕೇಳದಿರು ನೀನು|
ಅನವರತ ಸೇವೆಯನು ಮೊದಲಾಗಿ ಮಾಡುತಿರು
ಘನಮಹಿಮ ನೀನಪ್ಪೆ --- ಛಲವಾದಿಯೆ||
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
