ಹನಿಗಳ ಲೋಕ

ಹನಿಗಳ ಲೋಕ

ಕವನ

ದೀಪ ಮತ್ತು ಕತ್ತಲು 

ಇಡೀ

ಜಗಕೆ

ಬೆಳಕಿನ

ಕಲ್ಪನೆಯ

ಹರಡುತಿರುವ

ಓ ದೀಪವೇ...

 

ನೀನು

ಕತ್ತಲಲಿಹೆ

ಎಂಬ

ಜ್ಞಾನದ

ಅರಿವು

ನಿನಗಿಲ್ಲವೇಕೇ!?

***

ಕಿಲಾಡಿ ದೇವ! 

ಓ ದೇವ- 

ನೀನು

ತೆರೆಯ ಹಿಂದೆ

ಇದ್ದೇ

ಇಷ್ಟು

ಕಸರತ್ತು...

 

ಇನ್ನು

ಎದುರಿಗಿದ್ದಿದ್ದರೆ

ಮಾಡುತ್ತಿದ್ದೆ-

ಎಂತೆಂತಹ

ವಿಸ್ಮಯದ

ಮಸಲತ್ತು!

***

ಗುಳ್ಳೇ ನರಿ 

ರಾಜಕೀಯ

ಒಂದು

ಸರ್ಕಸ್

ಕಂಪನಿ-

ಯಾರೂ

ಸಿಂಹ ಅಲ್ಲಾ...

 

ಅಯ್ಯೋ-

ಎಲ್ಲಾ

ಚೆಂದದಿ

ಮೇಯುವ

ಗುಳ್ಳೇ-

ನರಿಗಳೆ ಎಲ್ಲಾ!

***

ದೇವರೇ ಬಲ್ಲ 

ರಾಜ್ಯದ

ಹಿರಿಯ

ನಾಗರೀಕರು

ದೇವಸ್ಥಾನಗಳಲ್ಲಿ

ಕ್ಯೂ

ನಿಲ್ಲಬೇಕಾಗಿಲ್ಲ...

 

ನಿಲ್ಲಲೂ

ಆಗದ

ನಾಗರೀಕರಿಗೆ

ಏನು

ಮಾಡುವುದೋ

ದೇವರೇ ಬಲ್ಲ!

***

ಹೊಗಳಿದ್ದಿದ್ದರೆ....

ಖುಷ್ಬೂ-

ಸುಂದರ

ಹಳೇ ಪಾತ್ರೇ...

ಎಂದಿದ್ದಕ್ಕೆ

ಡಿ ಎಂ ಕೆ ವಕ್ತಾರ

ಪಕ್ಷದಿಂದ ವಜಾ...

 

ಆಕೆ ಇನ್ನೂ

ಹೊಳೆ ಹೊಳೆವ

ಚಿರಯೌವನೇ-

ಎಂದಿದ್ದರೆ

ಮುಖ್ಯ ಮಂತ್ರಿಯೇ

ಆಗುತ್ತಿದ್ದರು ನಿಜಾ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್