ಹನಿಗವನಗಳು ೧
ಕವನ
ಚಳಿ ಎಂದು ಮುದುರಿ ಕುಳಿತರೆ,
ಹೊದಿಕೆ ತುಂಬಾ ಕತ್ತಲೆಯ ಮೋಹ.
ಮೈಕೊಡವಿ ಎದ್ದು ನಡೆದರೆ
ಹೊರಗೆಲ್ಲಾ ಬೆಳಕಿನ ಸ್ನೇಹ.
-----
ತಿಂಗಳ ಬೆಳಕಿನ ನೆರಳಿನಲ್ಲಿ ಮಲಗಿ,
ಇರುಳು ಕನಸು ಕಂಡಾಗ
ಹಗಲು ಮೂಡುತ್ತಿತ್ತು
ರವಿಯ ಆಸರೆಯಲ್ಲಿ.
-----
ಬೆಳಕಿನ ಹಬ್ಬದಲ್ಲಿ ಕತ್ತಲೆಯೇ ದೇವರು!
ಸದಾ ಕತ್ತಲನ್ನು ನೆನಪಿಸುತ್ತಾ
ಹಚ್ಚುವ ದೀಪಗಳ ಹಿಂದೆ
ಕತ್ತಲಿನ ನಾಮಸ್ಮರಣೆ!
-----
ಕತ್ತಲು ಕವಿದಂತೆ
ಚಳಿವ ಕಾವಳ
ಬೆಳಕು ಹರಿದಂತೆ
ಬಿಸಿಲ ಜಳಜಳಕ
-----
Comments
ಉ: ಹನಿಗವನಗಳು ೧
In reply to ಉ: ಹನಿಗವನಗಳು ೧ by mmshaik
ಉ: ಹನಿಗವನಗಳು ೧